ಕಾಂಗ್ರೆಸ್ನಲ್ಲಿ ಸಹಿ ಸಂಗ್ರಹ: ನಾಟಿ ಕೋಳಿ ರುಚಿ ಸವಿದರೂ ಕುರ್ಚಿ ಕಾಳಗ ಶಾಂತವಾಗಿಲ್ವಾ?
ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ನಡೆದ ಮುಸುಕಿನ ಗುದ್ದಾಟ ಸದ್ಯಕ್ಕೆ ಶಾಂತವಾದಂತಿದೆ. ಪರಸ್ಪರ ಒಬ್ಬರ ಮನೆಗೆ ಒಬ್ಬರು ಹೋಗಿ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡುವ ಮೂಲಕ ಗೊಂದಲ ಬಗೆರಿಸಿಕೊಂಡಿದ್ದಾರೆ. ಆದರೂ ಬೂದಿಮುಚ್ಚಿದ ಕೆಂಡದಂತಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಹಿ ಸಂಗ್ರಹದ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರು, (ಡಿಸೆಂಬರ್ 03): ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ನಡೆದ ಮುಸುಕಿನ ಗುದ್ದಾಟ ಸದ್ಯಕ್ಕೆ ಶಾಂತವಾದಂತಿದೆ. ಪರಸ್ಪರ ಒಬ್ಬರ ಮನೆಗೆ ಒಬ್ಬರು ಹೋಗಿ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡುವ ಮೂಲಕ ಗೊಂದಲ ಬಗೆರಿಸಿಕೊಂಡಿದ್ದಾರೆ. ಆದರೂ ಬೂದಿಮುಚ್ಚಿದ ಕೆಂಡದಂತಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಹಿ ಸಂಗ್ರಹದ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.
ಸಿದ್ದರಾಮಯ್ಯ ಅವರನ್ನ ಬ್ರದರ್ ಎಂದು ಡಿಕೆ ಶಿವಕುಮಾರ್ ಕರೆದಿರುವುದಕ್ಕೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್, ಯಾರು ಯಾರು ಯಾವಾಗಾ ಬ್ರದರ್ ಆಗುತ್ತಾರೋ , ಕ್ಯಾನ್ಸಲ್ ಆಗುತ್ತಾರೋ ಗೊತ್ತಿಲ್ಲ. ಯಾರನ್ನ ಸಿಎಂ ಮಾಡುವುದಕ್ಕೆ ಸಿಗ್ನೇಚರ್ (ಸಹಿ) ಕ್ಯಾಂಪೇನ್ ನಡೆಯುತ್ತಿದೆ. ಎಬಿಸಿ ಟೀಮ್ ಅಂತ ನಡೆಯುತ್ತಿದೆ. ನಮಗೂ ಆ ಮಾಹಿತಿ ಬಂದಿದೆ ಎಂದು ಹೊಸ ಬಾಂಬ್ ಸಿಡಿಸಿದರು. ಹಾಗಾದ್ರೆ, ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿಗಾಗಿ ಸಹಿ ಸಂಗ್ರಹ ನಡೆಯಿತ್ತಿದ್ಯಾ ಎನ್ನುವ ಪ್ರಶ್ನೆಗಳು ಉದ್ಭವಿಸಿದ್ದು, ಈ ಬಗ್ಗೆ ಕಾಂಗ್ರೆಸ್ ನಾಯಕರೇ ಸ್ಪಷ್ಟಪಡಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
