ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವುದು ಖುಷಿಯಾಗುತ್ತಿದೆ: ಟಾಪರ್​ ಅಂಕಿತಾ EXCLUSIVE ಮಾತು

| Updated By: ಗಂಗಾಧರ​ ಬ. ಸಾಬೋಜಿ

Updated on: May 09, 2024 | 12:29 PM

ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಮೊದಲನೇ ಸ್ಥಾನ ಪಡೆದ ಬಾಗಲಕೋಟೆ ಜಿಲ್ಲೆಯ ಮೂಲತಃ ಮುಧೋಳ ತಾಲೂಕಿನ ವಜ್ರಮಟ್ಟಿ ಗ್ರಾಮದ ನಿವಾಸಿ ಆಗಿರುವ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊನ್ನೂರು ಟಿವಿ9 ಜೊತೆಗೆ ಮಾತನಾಡಿದ್ದು, ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ. ಓದುವುದಕ್ಕೆ ಯಾವುದೇ ಒತ್ತಡ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಬಾಗಲಕೋಟೆ, ಮೇ 09: ಜಿಲ್ಲೆಯ ಮೂಲತಃ ಮುಧೋಳ ತಾಲೂಕಿನ ವಜ್ರಮಟ್ಟಿ ಗ್ರಾಮದ ನಿವಾಸಿ ಆಗಿರುವ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊನ್ನೂರು (ankita basappa konnuru) ಎಸ್​ಎಸ್​ಎಲ್​ಸಿ (SSLC) ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಮೊದಲನೇ ಸ್ಥಾನ ಪಡೆದುಕೊಂಡಿದ್ದಾರೆ. ಇದೇ ಖುಷಿಯಲ್ಲಿ ಟಿವಿ9 ಜೊತೆ ಮಾತನಾಡಿದ್ದು, ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ. ಇಷ್ಟೇ ಮಾರ್ಕ್ಸ್‌ ಪಡೆಯಬೇಕೆಂದು ನನಗೆ ಯಾವುದೇ ಒತ್ತಡ ಇರಲಿಲ್ಲ. ನಮ್ಮ ಕುಟುಂಬಸ್ಥರು ಓದು ಎಂದು ಯಾವುದೇ ಒತ್ತಡ ಹಾಕಲಿಲ್ಲ. ಪಿಯುಸಿಯಲ್ಲಿ ವಿಜ್ಞಾನ ವಿಭಾಗ ತೆಗೆದುಕೊಳ್ಳುವ ಆಸೆ ಇದೆ. IAS ಅಧಿಕಾರಿಯಾಗುವ ಕನಸು ಹೊಂದಿದ್ದೇನೆ. ಹಾಸ್ಟೆಲ್‌ನಲ್ಲಿ ಓದುತ್ತಿದ್ರಿಂದ ಮೊಬೈಲ್ ಬಳಕೆಗೆ ಅವಕಾಶ ಇರಲಿಲ್ಲ. ಪಠ್ಯಕ್ಕೆ ಸಂಬಂಧಿಸಿದಂತೆ ಅಗತ್ಯವಿದ್ದಾಗ ಮಾತ್ರ ಯೂಟ್ಯೂಬ್‌ನಲ್ಲಿ ಸರ್ಚ್‌ ಮಾಡುತ್ತಿದ್ದೆ. ಹಾರ್ಡ್‌ವರ್ಕ್ ಮಾಡಿದ್ರೆ ಸಕ್ಸಸ್‌ ಆಗಲು ಸಹಾಯವಾಗುತ್ತೆ ಎಂದು ಹೇಳಿದ್ದಾರೆ. ಸದ್ಯ ಅಂಕಿತಾ ಮನೆಯಲ್ಲಿ ಸಂಭ್ರಮ ಶುರುವಾಗಿದ್ದು, ಮಗಳಿಗೆ ಸಿಹಿ ತಿನ್ನಿಸಿ ತಂದೆ ತಾಯಿ ಖುಷಿಪಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 

 

 

Published On - 12:27 pm, Thu, 9 May 24

Follow us on