Karnataka Transport Strike; ರಾಜ್ಯದಲ್ಲಿ ಇದುವರೆಗೆ ಯಾವುದೇ ಅಹಿತಕರ ಘಟನೆ ಜರುಗಿಲ್ಲ: ಜಿ ಪರಮೇಶ್ವರ್

Updated on: Aug 05, 2025 | 2:06 PM

ಸಾರ್ವಜನಿಕರಿಗೆ ಅಗಾಧವಾದ ಕಷ್ಟ ಎದುರಾಗಿದೆ, ಅವರ ಬೇಡಿಕೆಗಳೇನು ಅಂತ ತನಗೆ ಗೊತ್ತಿಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನೌಕರರ ಸಂಸ್ಥೆ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ, ಅದರೆ ಸಾರ್ವಜಿಕರಿಗೆ ಭಾರೀ ತೊಂದರೆಯಾಗಿರೋದು ಮಾತ್ರ ಸತ್ಯ, ಮುಷ್ಕರ ನಡೆಸುತ್ತಿರುವವರ ಮುಂದೆ ಮಾತುಕತೆಯ ಅವಕಾಶವಿದೆ ಎಂದು ಪರಮೇಶ್ವರ್ ಹೇಳಿದರು.

ಬೆಂಗಳೂರು, ಆಗಸ್ಟ್ 5: ಸಾರಿಗೆ ನೌಕರರು ಇಂದಿನಿಂದ ಆರಂಭಿಸಿರುವ ಅನಿರ್ದಾಷ್ಟಾವಧಿ ಮುಷ್ಕರ (indefinite strike) ಸಾಮಾನ್ಯ ಜನಜೀವನ ಮೇಲೆ ಭಾರೀ ಪರಿಣಾಮ ಬೀರಿದೆ. ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್ ಹೇಳುವ ಹಾಗೆ ರಾಜ್ಯದ ಯಾವುದೇ ಭಾಗದಲ್ಲಿ ಅಹಿತಕರ ಘಟನೆ ಜರುಗಿಲ್ಲ, ಅಲ್ಲಲ್ಲಿ ಸಣಪುಟ್ಟ ಘಟನೆಗಳು ಜರುಗಿವೆ, ಆದರೆ ಅವುಗಳಿಂದ ಹೆಚ್ಚಿನ ಸಮಸ್ಯೆಯಾಗಿಲ್ಲ ಎಂದು ಹೇಳಿದರು. ರಾಜ್ಯದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಜಾರಿಯಲ್ಲಿದೆ, ಆಯಕಟ್ಟಿನ ಜಾಗಗಳ ಮೇಲೆ ನಿಗಾ ಇಡಲಾಗಿದೆ, ಜನರ ಮನಸ್ಥಿತಿ ಬಗ್ಗೆ ಹೇಳಲಾಗಲ್ಲ, ಯಾವ ಕ್ಷಣದಲ್ಲಾದರೂ ಜನ ಗಲಾಟೆ ಸೃಷ್ಟಿಸಬಹುದು ಎಂದು ಪರಮೇಶ್ವರ್ ಹೇಳಿದರು.

ಇದನ್ನೂ ಓದಿ:  ಆಗಸ್ಟ್ ಕೊನೆಯಲ್ಲಿ ಮತ್ತೆ ಟೋಯಿಂಗ್ ಶುರು: ಗೃಹ ಸಚಿವ ಪರಮೇಶ್ವರ್ ಘೋಷಣೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ