ವಕ್ಫ್ ವಿವಾದ: ವಿಜಯಪುರದಲ್ಲಿ ಅಹೋರಾತ್ರಿ ಧರಣಿ, ಟೆಂಟ್​ನಲ್ಲೇ ರಾತ್ರಿ ಕಳೆದ ಯತ್ನಾಳ್, ಶೋಭಾ

ವಕ್ಫ್ ವಿವಾದ: ವಿಜಯಪುರದಲ್ಲಿ ಅಹೋರಾತ್ರಿ ಧರಣಿ, ಟೆಂಟ್​ನಲ್ಲೇ ರಾತ್ರಿ ಕಳೆದ ಯತ್ನಾಳ್, ಶೋಭಾ

ಅಶೋಕ ಯಡಳ್ಳಿ, ವಿಜಯಪುರ
| Updated By: Ganapathi Sharma

Updated on: Nov 05, 2024 | 7:55 AM

ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿರುವುದನ್ನು ಪ್ರತಿಭಟಿಸಿ ಮತ್ತು ವಕ್ಫ್ ಹೆಸರು ತೆಗೆದುಹಾಕುವಂತೆ ಆಗ್ರಹಿಸಿ ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ನೇತೃತ್ವದಲ್ಲಿ ನಡೆಯುತ್ತಿರುವ ರೈತರು ಅಹೋರಾತ್ರಿ ಧರಣಿ ನಡೆಸಿದರು. ಯತ್ನಾಳ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಇತರ ಧರಣಿ ನಿರತರು, ವಿಜಯಪುರ ಡಿಸಿ ಕಚೇರಿ ಬಳಿಯೇ ರಾತ್ರಿ ಕಳೆದರು. ವಿಡಿಯೋ ಇಲ್ಲಿದೆ.

ವಿಜಯಪುರ, ನವೆಂಬರ್ 5: ರೈತರ ಪಹಣಿಯಿಂದ ವಕ್ಫ್​​ ಪದ​ ತೆಗೆದುಹಾಕುವಂತೆ ಆಗ್ರಹಿಸಿ ವಿಜಯಪುರ ಡಿಸಿ ಕಚೇರಿ ಬಳಿ ರೈತರಿಂದ ಅಹೋರಾತ್ರಿ ಧರಣಿ, ಪ್ರತಿಭಟನೆ ನಡೆಯುತ್ತಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಅಹೋರಾತ್ರಿ ಹೋರಾಟ ನಡೆಯುತ್ತಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಾಥ್​​ ನೀಡಿದ್ದಾರೆ. ಕೇಂದ್ರ ಸಚಿವೆಯೂ ಸೇರಿದಂತೆ ನೂರಾರು ರೈತರು, ಬಿಜೆಪಿ ಕಾರ್ಯಕರ್ತರು ಧರಣಿ ನಡೆಯುತ್ತಿರುವ ಪ್ರದೇಶದ ಟೆಂಟ್​ನಲ್ಲೇ ರಾತ್ರಿ ಕಳೆದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ