Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಪಿಲ್ಲರ್ ದಿಢೀರ್​ ಕುಸಿತ: ತಪ್ಪಿದ ಭಾರೀ ಅನಾಹುತ

ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಪಿಲ್ಲರ್ ದಿಢೀರ್​ ಕುಸಿತ: ತಪ್ಪಿದ ಭಾರೀ ಅನಾಹುತ

ಸೂರಜ್​, ಮಹಾವೀರ್​ ಉತ್ತರೆ
| Updated By: ಗಂಗಾಧರ​ ಬ. ಸಾಬೋಜಿ

Updated on: Feb 14, 2025 | 3:35 PM

ಕಾರವಾರದ ಬಳಿ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಸಂಪರ್ಕ ಕಲ್ಪಿಸುವ ಕಾಳಿ ನದಿ ಸೇತುವೆಯ ಪಿಲ್ಲರ್ ರಾತ್ರಿ ಹೊತ್ತು ಕುಸಿದಿದೆ. ಭಾರೀ ಅನಾಹುತ ತಪ್ಪಿದೆ. ಕಳೆದ ಆಗಸ್ಟ್ 7 ರಂದು ಈ ಸೇತುವೆಯ ಭಾಗ ಈಗಾಗಲೇ ಕುಸಿದಿತ್ತು. ಹಗಲು ರಾತ್ರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಪಿಲ್ಲರ್ ಕುಸಿತದಿಂದ ಉಳಿದ ಸೇತುವೆ ಅಪಾಯವಿದೆ ಎನ್ನಲಾಗುತ್ತಿದೆ.

​ಕಾರವಾರ, ಫೆಬ್ರವರಿ 14: ಕಾಳಿ ನದಿಗೆ (Kali River) ಅಡ್ಡಲಾಗಿ ಕಟ್ಟಿರುವ ಸೇತುವೆ ಪಿಲ್ಲರ್ ದಿಢೀರ್​ ಕುಸಿದಿರುವಂತಹ ಘಟನೆ ನಡೆದಿದೆ. ​ಕಾರವಾರದ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಸೇತುವೆ ಸಂಪರ್ಕ ಕಲ್ಪಿಸುತ್ತೆ. ರಾತ್ರಿಹೊತ್ತು ಪಿಲ್ಲರ್​ ಜಾರಿ ಬಿದ್ದಿದ್ದರಿಂದ ಬಾರಿ ಅನಾಹುತ ತಪ್ಪಿದೆ. ಪಿಲ್ಲರ್ ಒಂದು ಭಾಗ ಕುಸಿದು ಬಿದ್ದರಿಂದ ಸ್ಲ್ಯಾಬ್​ ಮೇಲೆದ್ದಿದೆ. ಕಳೆದ ವರ್ಷ ಆಗಷ್ಟ್ 7 ರಂದು ಕಾಳಿ ಸೇತುವೆ ಕುಸಿತಗೊಂಡಿತ್ತು. ಸದ್ಯ ಹಗಲು, ರಾತ್ರಿ ನಿರಂತರವಾಗಿ ಕಾರ್ಯಾಚರಣೆ ನಡೆಯುತ್ತಿದೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.