AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕತ್ರಿನಾ ಕೈಫ್; ಆಶ್ಲೇಷಾ ಬಲಿ ಪೂಜೆ ಮಾಡಿಸಿದ ಬಾಲಿವುಡ್ ನಟಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕತ್ರಿನಾ ಕೈಫ್; ಆಶ್ಲೇಷಾ ಬಲಿ ಪೂಜೆ ಮಾಡಿಸಿದ ಬಾಲಿವುಡ್ ನಟಿ

ರಾಜೇಶ್ ದುಗ್ಗುಮನೆ
|

Updated on:Mar 12, 2025 | 10:33 AM

Share

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕತ್ರಿನಾ ಕೈಫ್ ಆಗಮಿಸಿದ್ದಾರೆ. ಅವರು ಇಲ್ಲಿ ವಿವಿಧ ರೀತಿಯ ಪೂಜೆಗಳನ್ನು ಮಾಡಿಸುತ್ತಾ ಇದ್ದಾರೆ. ಅವರು ಸಂತಾನ ಪ್ರಾಪ್ತಿಗಾಗಿ ಈ ಪೂಜೆಗಳನ್ನು ಮಾಡಿಸುತ್ತಾ ಇದ್ದಾರೆ ಎಂದು ಹೇಳಲಾಗುತ್ತಿದೆ. ಆ ಬಗ್ಗೆ ಖಚಿತ ಮಾಹಿತಿ ಇಲ್ಲ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರು ತಂಗಿದ್ದಾರೆ. ದೇವಸ್ಥಾನದಲ್ಲಿ ಆಶ್ಲೇಷಾ ಬಲಿ ಪೂಜೆಯಲ್ಲಿ ಕತ್ರಿನಾ ಭಾಗಿ ಆಗಿದ್ದಾರೆ. ಆ ಬಳಿಕ ಅವರು ಸರ್ಪ ಸಂಸ್ಕಾರ ಸೇವೆ, ನಾಗ ಪ್ರತಿಷ್ಠಾ ಸೇವೆಯಲ್ಲಿ ಭಾಗವಹಿಸಲಿದ್ದಾರೆ ಅನ್ನೋದು ವಿಶೇಷ. ಸಂತಾನ, ವ್ಯವಹಾರಿಕ, ಕೌಟುಂಬಿಕ ಜೀವನದ ಒಳಿತಿಗಾಗಿ ವಿವಿಧ ಪೂಜೆಗಳನ್ನು ಮಾಡಿಸುತ್ತಾ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Mar 12, 2025 10:32 AM
Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More