ಗಿಲ್ಲಿ ಪಕ್ಕ ರಕ್ಷಿತಾ ಅಲ್ಲ, ನಾನು ಇರಬೇಕಿತ್ತು: ಕಾವ್ಯಾ ಅಸಮಾಧಾನದ ಮಾತು
ಬಿಗ್ ಬಾಸ್ ಕನ್ನಡ ಫಿನಾಲೆಯಲ್ಲಿ ಗಿಲ್ಲಿ ನಟ ವಿನ್ ಆದರು. ರಕ್ಷಿತಾ ಶೆಟ್ಟಿ ಅವರಿಗೆ ರನ್ನರ್ ಅಪ್ ಸ್ಥಾನ ಸಿಕ್ಕಿತು. ಅಶ್ವಿನಿ ಗೌಡ 2ನೇ ರನ್ನರ್ ಅಪ್ ಆದರು. 3ನೇ ರನ್ನರ್ ಅಪ್ ಸ್ಥಾನಕ್ಕೆ ಕಾವ್ಯಾ ಶೈವ ತೃಪ್ತಿಪಟ್ಟುಕೊಳ್ಳಬೇಕಾಯಿತು. ಈ ಬಗ್ಗೆ ಕಾವ್ಯಾ ಪ್ರತಿಕ್ರಿಯೆ ನೀಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆಯಲ್ಲಿ ಗಿಲ್ಲಿ ನಟ (Gilli Nata) ಅವರು ವಿನ್ ಆದರು. ರಕ್ಷಿತಾ ಶೆಟ್ಟಿ ಅವರಿಗೆ ರನ್ನರ್ ಅಪ್ ಸ್ಥಾನ ಸಿಕ್ಕಿತು. ಅಶ್ವಿನಿ ಗೌಡ 2ನೇ ರನ್ನರ್ ಅಪ್ ಆದರು. 3ನೇ ರನ್ನರ್ ಅಪ್ ಸ್ಥಾನಕ್ಕೆ ಕಾವ್ಯಾ ಶೈವ ಅವರು ತೃಪ್ತಿಪಟ್ಟುಕೊಳ್ಳಬೇಕಾಯಿತು. ಈ ಬಗ್ಗೆ ಕಾವ್ಯಾ ಶೈವ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಆಟ ಹಾಳಾಗಬೇಕು ಎಂಬ ಮನಸ್ಥಿತಿ ನನಗೆ ಇಲ್ಲ. ನನ್ನ ದೃಷ್ಟಿಕೋನದಲ್ಲಿ ರಕ್ಷಿತಾ ರನ್ನರ್ ಅಪ್ ಆಗಿದ್ದು ನನಗೆ ಇಷ್ಟ ಆಗಿಲ್ಲ. ಆದರೆ ಜನರಿಗೆ ಅದು ಇಷ್ಟ ಆಗಿದೆ. ಅದನ್ನು ಬದಲಾಯಿಸೋಕೆ ಆಗಲ್ಲ. ನನ್ನ ಪ್ರಕಾರ ರಕ್ಷಿತಾ ಸ್ಥಾನದಲ್ಲಿ ನಾನೇ ಇರಬೇಕಿತ್ತು’ ಎಂದು ಕಾವ್ಯಾ ಶೈವ (Kavya Shaiva) ಅವರು ಹೇಳಿದ್ದಾರೆ. ಈ ಬಾರಿ ಬಿಗ್ ಬಾಸ್ ಫಿನಾಲೆಗೆ ಮೂವರು ಮಹಿಳಾ ಸ್ಪರ್ಧಿಗಳು ಬಂದಿದ್ದರು. ಆ ಬಗ್ಗೆ ಕಾವ್ಯಾ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
