ಬಿಗ್ ಬಾಸ್: ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಗಿಲ್ಲಿ ನಟ ‘ಬಿಗ್ ಬಾಸ್ ಕನ್ನಡ 12’ ವಿನ್ನರ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಅವರ ಜೊತೆ ಕಾವ್ಯಾ ಶೈವ ತುಂಬ ಕ್ಲೋಸ್ ಆಗಿದ್ದರು. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಕಾವ್ಯಾಗೆ ಖುಷಿ ಆಗಿದೆ.
ಗಿಲ್ಲಿ ನಟ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ವಿನ್ನರ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಅವರ ಜೊತೆ ಕಾವ್ಯಾ ಶೈವ ಅವರು ತುಂಬ ಕ್ಲೋಸ್ ಆಗಿದ್ದರು. ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಿದ್ದರು. ಕಾವ್ಯಾ ಶೈವ (Kavya Shaiva) ಅವರು 3ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಗಿಲ್ಲಿ (Gilli Nata) ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಕಾವ್ಯಾಗೆ ಖುಷಿ ಆಗಿದೆ. ‘ಗಿಲ್ಲಿ ಗೆದ್ದಿದ್ದಕ್ಕೆ ನನಗೆ ತುಂಬಾ ಖುಷಿ ಇದೆ. ಆ ಗೆಲುವಿಗೆ ಅವನು ಅರ್ಹ. ಇಷ್ಟು ಜನರ ಪ್ರೀತಿ ಗಳಿಸಿದ್ದಕ್ಕೆ ಫ್ರೆಂಡ್ ಆಗಿ ನನಗೆ ಅವನ ಬಗ್ಗೆ ಬಹಳ ಹೆಮ್ಮೆ ಇದೆ. ಅವನ ಜೊತೆ ಇನ್ನೂ ಮಾತಾಡೋಕೆ ಆಗಿಲ್ಲ. ಮಾತನಾಡಬೇಕು’ ಎಂದು ಕಾವ್ಯಾ ಶೈವ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
