ಬಿಗ್ ಬಾಸ್ ಮುಗಿದರೂ ಗಿಲ್ಲಿನ ಕೆಣಕಿದ ಅಶ್ವಿನಿ ಗೌಡ; ಖಡಕ್ ತಿರುಗೇಟು ಕೊಟ್ಟ ಪಳಾರ್
ಗಿಲ್ಲಿ ಗೆಲುವಿನ ನಂತರ ಅಶ್ವಿನಿ ಗೌಡ ನೀಡಿದ ಒಂದು ಹೇಳಿಕೆ ವೈರಲ್ ಆಗಿದೆ. ಗಿಲ್ಲಿ ನಟ ಬಡವನ ರೀತಿ ನಟಿಸಿದ್ದರು ಎಂಬ ಅರ್ಥದಲ್ಲಿ ಅಶ್ವಿನಿ ಮಾತನಾಡಿದ್ದಾರೆ. ಆ ಮೂಲಕ ಬಿಗ್ ಬಾಸ್ ಮುಗಿದ ಮೇಲೂ ಅವರು ಕೆಣಕಿದ್ದಾರೆ. ಅಶ್ವಿನಿ ನೀಡಿದ ಹೇಳಿಕೆಗೆ ಗಿಲ್ಲಿ ತಿರುಗೇಟು ನೀಡಿದ್ದಾರೆ.
ಗಿಲ್ಲಿ ನಟ ಅವರ ಗೆಲುವಿನ ಬಳಿಕ ಅಶ್ವಿನಿ ಗೌಡ (Ashwini Gowda) ಅವರು ನೀಡಿದ ಒಂದು ಹೇಳಿಕೆ ವೈರಲ್ ಆಗಿದೆ. ಗಿಲ್ಲಿ ನಟ ಬಡವನ ರೀತಿ ನಟಿಸಿದ್ದರು ಎಂಬ ಅರ್ಥದಲ್ಲಿ ಅಶ್ವಿನಿ ಮಾತಾಡಿದ್ದಾರೆ. ಆ ಮೂಲಕ ಬಿಗ್ ಬಾಸ್ (BBK 12) ಮುಗಿದ ಮೇಲೂ ಅವರು ಕೆಣಕಿದ್ದಾರೆ. ಅಶ್ವಿನಿ ಗೌಡ ಅವರ ಈ ಹೇಳಿಕೆಗೆ ಗಿಲ್ಲಿ ನಟ ಖಡಕ್ ತಿರುಗೇಟು ನೀಡಿದ್ದಾರೆ. ‘ಮೇಡಂ ಏನು ಹೇಳಿದ್ದಾರೋ ನಾನು ನೋಡಿಲ್ಲ. ಒಂದು ವೇಳೆ ಅವರು ಹೇಳಿದ್ದರೆ, ನಾನು ಬಡವ ಅಂತ ಯಾವತ್ತೂ ಹೇಳಿಕೊಂಡಿಲ್ಲ. ನಾನು ಬನಿಯನ್ ಹಾಕಿಕೊಂಡಿದ್ದಕ್ಕೆ ಬಡವ ಅಂತ ಹೇಳೋಕೆ ಆಗಲ್ಲ. ಶ್ರೀಮಂತರು ಬನಿಯನ್, ನೈಟ್ ಪ್ಯಾಂಟ್, ಚಡ್ಡಿ ಹಾಕಲ್ವಾ? ಮೇಡಂ ಮಾತಿನ ಭರದಲ್ಲಿ ಆ ರೀತಿ ಹೇಳಿರಬಹುದು’ ಎಂದು ಬಿಗ್ ಬಾಸ್ ಮನೆಯೊಳಗಿನ ರೀತಿಯೇ ಗಿಲ್ಲಿ ನಟ (Gilli Nata) ಅವರು ತಿರುಗೇಟು ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
