ಕೇದಾರನಾಥದಲ್ಲಿ ಭಾರೀ ಹಿಮಪಾತ; ಯಾತ್ರಿಕರ ರಕ್ಷಣೆ, ಸೌಕರ್ಯಕ್ಕೆ ಕ್ರಮ ಕೈಗೊಂಡ ಜಿಲ್ಲಾಡಳಿತ
ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಸ್ಥಳವಾದ ಶ್ರೀ ಕೇದಾರನಾಥ ಧಾಮದಲ್ಲಿ ನಿರಂತರ ಹಿಮಪಾತ ವರದಿಯಾಗಿದ್ದು, ಇಡೀ ಕ್ಷೇತ್ರ ಶೀತಲ ವಾತಾವರಣದಿಂದ ಆವೃತಗೊಂಡಿದೆ. ಕಡು ಚಳಿಯ ನಡುವೆಯೂ ಕೇದಾರನಾಥ ಧಾಮಕ್ಕೆ ಆಗಮಿಸುತ್ತಿರುವ ಭಕ್ತಾದಿಗಳ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಜಿಲ್ಲಾಡಳಿತವು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಹಿಮಪಾತದ ಹಿನ್ನೆಲೆಯಲ್ಲಿ ಯಾತ್ರಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಆಡಳಿತ ಮಂಡಳಿ ಹಾಗೂ ಸ್ಥಳೀಯ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಕೇದಾರನಾಥ, ನವೆಂಬರ್ 2: ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಸ್ಥಳವಾದ ಕೇದಾರನಾಥ ಧಾಮದಲ್ಲಿ ನಿರಂತರ ಹಿಮಪಾತ ವರದಿಯಾಗಿದ್ದು, ಇಡೀ ಕ್ಷೇತ್ರ ಶೀತಲ ವಾತಾವರಣದಿಂದ ಆವೃತಗೊಂಡಿದೆ. ಕಡು ಚಳಿಯ ನಡುವೆಯೂ ಕೇದಾರನಾಥ ಧಾಮಕ್ಕೆ ಆಗಮಿಸುತ್ತಿರುವ ಭಕ್ತಾದಿಗಳ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಜಿಲ್ಲಾಡಳಿತವು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಹಿಮಪಾತದ ಹಿನ್ನೆಲೆಯಲ್ಲಿ ಯಾತ್ರಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಆಡಳಿತ ಮಂಡಳಿ ಹಾಗೂ ಸ್ಥಳೀಯ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಕಡು ಚಳಿ ಮತ್ತು ಎತ್ತರದ ಪ್ರದೇಶದಲ್ಲಿ ಶ್ವಾಸಕೋಶ ಹಾಗೂ ಆರೋಗ್ಯ ಸಮಸ್ಯೆಗಳು ಎದುರಾಗದಂತೆ ತಡೆಯಲು ವೈದ್ಯಕೀಯ ತಂಡಗಳು ಮತ್ತು ತುರ್ತು ಚಿಕಿತ್ಸಾ ವ್ಯವಸ್ಥೆಯನ್ನು ಸಜ್ಜಾಗಿಡಲಾಗಿದೆ. ಭಕ್ತರು ಚಳಿಯಿಂದ ರಕ್ಷಣೆ ಪಡೆಯಲು ಪ್ರಮುಖ ಕಾಲುದಾರಿಗಳು, ಧಾಮದ ಆವರಣ ಹಾಗೂ ತಂಗುದಾಣಗಳಲ್ಲಿ ಬೆಂಕಿ ಕಾಯಿಸಿಕೊಳ್ಳಲು ‘ಬೋನ್ ಫೈಯರ್’ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ಬಿಸಿ ನೀರು, ತಾತ್ಕಾಲಿಕ ಆಶ್ರಯ ತಾಣಗಳು ಹಾಗೂ ಮೂಲಭೂತ ಸೌಕರ್ಯಗಳು ನಿರಂತರವಾಗಿ ಸಿಗುವಂತೆ ಆಡಳಿತ ಮಂಡಳಿ ನಿಗಾ ವಹಿಸಿದೆ. ಶೀತ ವಾತಾವರಣದ ನಡುವೆಯೂ ಶಿವನ ದರ್ಶನಕ್ಕಾಗಿ ಸಾವಿರಾರು ಭಕ್ತರು ಕೇದಾರನಾಥ ಧಾಮಕ್ಕೆ ಆಗಮಿಸುತ್ತಿದ್ದು, ಹವಾಮಾನ ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣ ಬೆಳೆಸುವಂತೆ ಯಾತ್ರಿಕರಲ್ಲಿ ಮನವಿ ಮಾಡಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ