ಪಾಳು ಬಿದ್ದ ಬಂಗಲೆಯಲ್ಲಿ ನಾಲ್ಕು ದಿನ ಆಶ್ರಯ ಪಡೆದಿದ್ದ ಶರಣ್ಯ!

Edited By:

Updated on: Apr 06, 2026 | 11:10 AM

ಕೊಡಗು ಜಿಲ್ಲೆಯ ಕಾಡಿನಲ್ಲಿ ನಾಲ್ಕು ದಿನಗಳ ಕಾಲ ನಾಪತ್ತೆಯಾಗಿದ್ದ ಕೇರಳದ ಯುವತಿ ಶರಣ್ಯ ಕೊನೆಗೂ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಕೇರಳದ ಕೊಯಿಕೋಡ್‌ನ ನಿವಾಸಿ ಶರಣ್ಯ ಏಪ್ರಿಲ್ 2ರಂದು ಮಡಿಕೇರಿ ತಾಲೂಕಿನ ಗಡಿಯಂಬಡಮೋಳ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದರು. ಹತ್ತು ಜನರ ತಂಡದಲ್ಲಿದ್ದ ಶರಣ್ಯ ದಾರಿ ತಪ್ಪಿ ದಟ್ಟ ಕಾಡಿನಲ್ಲಿ ಕಣ್ಮರೆಯಾಗಿದ್ದರು.

ಕೊಡಗು, ಏ​ಪ್ರಿಲ್ 06: ಕೊಡಗು ಜಿಲ್ಲೆಯ ಕಾಡಿನಲ್ಲಿ ನಾಲ್ಕು ದಿನಗಳ ಕಾಲ ನಾಪತ್ತೆಯಾಗಿದ್ದ ಕೇರಳದ ಯುವತಿ ಶರಣ್ಯ ಕೊನೆಗೂ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಕೇರಳದ ಕೊಯಿಕೋಡ್‌ನ ನಿವಾಸಿ ಶರಣ್ಯ ಏಪ್ರಿಲ್ 2ರಂದು ಮಡಿಕೇರಿ ತಾಲೂಕಿನ ಗಡಿಯಂಬಡಮೋಳ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದರು. ಹತ್ತು ಜನರ ತಂಡದಲ್ಲಿದ್ದ ಶರಣ್ಯ ದಾರಿ ತಪ್ಪಿ ದಟ್ಟ ಕಾಡಿನಲ್ಲಿ ಕಣ್ಮರೆಯಾಗಿದ್ದರು.

ಕಳೆದ ನಾಲ್ಕು ದಿನಗಳಿಂದ ಅರಣ್ಯ ಇಲಾಖೆ, ಸ್ಥಳೀಯರು, ಪೊಲೀಸರು ಮತ್ತು ಶ್ವಾನದಳದೊಂದಿಗೆ ತೀವ್ರ ಕಾರ್ಯಾಚರಣೆ ನಡೆಸಿದ್ದರು. ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಶರಣ್ಯ ಕೊಲ್ಲಿಯೊಂದರ ಬಳಿ ನಿತ್ರಾಣಗೊಂಡ ಸ್ಥಿತಿಯಲ್ಲಿ ಸ್ಥಳೀಯರಿಗೆ ಕಂಡುಬಂದರು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ತಂಡ ಆಕೆಯನ್ನು ಸುರಕ್ಷಿತವಾಗಿ ಕರೆತಂದಿದೆ.

ಶರಣ್ಯ ತಾನು ಪಾಳುಬಿದ್ದ ಬಂಗಲೆಯಲ್ಲಿ ನಾಲ್ಕು ದಿನಗಳನ್ನು ಕಳೆದಿದ್ದು, ತನ್ನ ಬಳಿ ಇದ್ದ ಬಿಸ್ಕೆಟ್ ಮತ್ತು ನೀರು ಕುಡಿದು ಜೀವ ಉಳಿಸಿಕೊಂಡಿದ್ದಾಗಿ ತಿಳಿಸಿದ್ದಾರೆ. ನಿತ್ರಾಣಗೊಂಡಿದ್ದ ಶರಣ್ಯ ಅವರಿಗೆ ವಿರಾಜಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ನಂತರ ಅವರನ್ನು ಸ್ವಗ್ರಾಮ ಕೊಯಿಕೋಡಿಗೆ ಕಳುಹಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರ ಪೊಣ್ಣಣ್ಣ ಅವರು ಶರಣ್ಯ ಅವರನ್ನು ಭೇಟಿಯಾಗಿ ರಕ್ಷಣಾ ತಂಡಗಳ ಶ್ರಮವನ್ನು ಶ್ಲಾಘಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Follow Us