ಬೇತಾಳ ದೇವಾಲಯದ ಮೇಲೆ ಬೇತಮಂಗಲ ಪೊಲೀಸರಿಂದ ದಿಢೀರ್ ದಾಳಿ: ಕಾರಣ ಇಲ್ಲಿದೆ
ಕೋಲಾರ ಜಿಲ್ಲೆ ಕೆಜಿಎಫ್‌ನ ಬೇತಾಳ ದೇವಾಲಯದಲ್ಲಿ ಅಕ್ರಮ ಚಟುವಟಿಕೆಗಳು ಹಾಗೂ ಮಹಿಳೆಯರ ಮೇಲಿನ ಹಿಂಸೆಯ ಆರೋಪದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಮಾವಾಸ್ಯೆ ದಿನದಂದು ನಡೆದ ಈ ಕಾರ್ಯಾಚರಣೆಯಲ್ಲಿ ದೇವಾಲಯದ ನಿರ್ಮಾತೃ ಅಗೋರಿ ಚಂದ್ರನಾಥ್ ಗುರೂಜಿಯನ್ನು ವಶಕ್ಕೆ ಪಡೆಯಲಾಗಿದ್ದು, ಅವರ ವಿರುದ್ಧ ಮಾಟಮಂತ್ರ, ಕುಡಿತ ಬಿಡಿಸುವ ನೆಪದಲ್ಲಿ ವಂಚನೆ ಆರೋಪಗಳು ಕೇಳಿಬಂದಿವೆ.
ಕೋಲಾರ, ಜುಲೈ 14: ಜಿಲ್ಲೆ ಕೆಜಿಎಫ್ ತಾಲೂಕಿನ ಐವರಹಳ್ಳಿ ಗ್ರಾಮದ ಬಳಿಯಿರುವ ಬೇತಾಳ ದೇವಾಲಯದ ಮೇಲೆ ಬೇತಮಂಗಲ ಪೊಲೀಸರು ದಾಳಿ ನಡೆಸಿದ್ದಾರೆ. ಅಮಾವಾಸ್ಯೆ ದಿನದಂದೇ ನಡೆದ ಈ ಕಾರ್ಯಾಚರಣೆಯಲ್ಲಿ ದೇವಾಲಯದ ನಿರ್ಮಾತೃ ಅಗೋರಿ ಚಂದ್ರನಾಥ್ ಗುರೂಜಿಯನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ದೇವಾಲಯವು 108 ಅಡಿ ಎತ್ತರದ ಬೇತಾಳ ವಿಗ್ರಹದ ಮೂಲಕ ಆಂಧ್ರ ಮತ್ತು ತಮಿಳುನಾಡಿನಿಂದ ಭಕ್ತರನ್ನು ಆಕರ್ಷಿಸುತ್ತಿತ್ತು. ಆದರೆ, ಇಲ್ಲಿ ಮಾಟಮಂತ್ರ, ದೆವ್ವ ಬಿಡಿಸುವಿಕೆ, ಕುಡಿತ ಬಿಡಿಸುವ ಹೆಸರಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದವು ಎಂಬ ಆರೋಪ ಕೇಳಿಬಂದಿತ್ತು. ವಿಶೇಷವಾಗಿ, ಮಹಿಳೆಯರಿಗೆ ದೆವ್ವ ಬಿಡಿಸುವ ನೆಪದಲ್ಲಿ ಹಿಂಸೆ ನೀಡಲಾಗುತ್ತಿತ್ತು ಎಂದು ಸ್ಥಳೀಯರು ದೂರು ನೀಡಿದ್ದರು. ಈ ಹಿನ್ನೆಲೆ ಸಿಪಿಐ ಜಗದೀಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
