ನಟ್ಟು ಬೋಲ್ಟು ವಿವಾದಕ್ಕೆ ಸಾಧು ಕೋಕಿಲ ಕಿತಾಪತಿ ಕಾರಣ: ಸುದೀಪ್ ನೇರ ಮಾತು

Updated on: Sep 01, 2025 | 9:13 PM

ಕನ್ನಡ ಚಿತ್ರರಂಗದ ನಟ್ಟು ಬೋಲ್ಟು ಟೈಟ್ ಮಾಡಬೇಕಾಗುತ್ತದೆ ಎಂದು ಡಿಕೆ ಶಿವಕುಮಾರ್ ಅವರು ಹೇಳಿದ್ದು ಒಂದಷ್ಟು ವಿವಾದಕ್ಕೆ ಕಾರಣ ಆಗಿತ್ತು. ಅದಕ್ಕೆ ಕಾರಣ ಆಗಿದ್ದೇ ಸಾಧು ಕೋಕಿಲ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸುದೀಪ್ ಅವರು ಈ ವಿಷಯದ ಬಗ್ಗೆ ಮಾತನಾಡಿದರು.

ಕನ್ನಡ ಚಿತ್ರರಂಗದ ನಟ್ಟು ಬೋಲ್ಟು ಟೈಟ್ ಮಾಡಬೇಕಾಗುತ್ತದೆ ಎಂದು ಡಿಕೆ ಶಿವಕುಮಾರ್ (DK Shivakumar) ಅವರು ಹೇಳಿದ್ದು ಒಂದಷ್ಟು ವಿವಾದಕ್ಕೆ ಕಾರಣ ಆಗಿತ್ತು. ಅದಕ್ಕೆ ಕಾರಣ ಆಗಿದ್ದೇ ಸಾಧು ಕೋಕಿಲ ಎಂದು ಕಿಚ್ಚ ಸುದೀಪ್ (Kichcha Sudeep) ಅವರು ಹೇಳಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸುದೀಪ್ ಅವರು ಈ ವಿಷಯದ ಬಗ್ಗೆ ಮಾತನಾಡಿದರು. ‘ಇದರಲ್ಲಿ ಡಿಕೆ ಸಾಹೇಬರದ್ದು ಏನೂ ಇಲ್ಲ. ಇದರಲ್ಲಿ ಎಲ್ಲ ಕಿತಾಪತಿ ಇರೋದು ಸಾಧು ಕೋಕಿಲ (Sadhu Kokila) ಅವರದ್ದು. ಎಲ್ಲರನ್ನೂ ಕರೆದರೆ ನಾನು ಹೇಗೆ ನಿಭಾಯಿಸಲಿ? ಯಾರಿಗೆ ಸೆಕ್ಯುರಿಟಿ ಕೊಡಲಿ ಅಂತ ಸಾಧು ಕೋಕಿಲ ಆಮೇಲೆ ಹೇಳಿದರು. ಈ ಮಾತನ್ನು ಮೊದಲೇ ಡಿಕೆ ಶಿವಕುಮಾರ್​ ಅವರಿಗೆ ಸಾಧು ಹೇಳಬೇಕಿತ್ತು. ಸಾಧುದು ಕೂಡ ತಪ್ಪಿಲ್ಲ. ಅವರು ಇರುವುದೇ ಹಾಗೆ. ಯಾವಾಗಲೂ ತಮಾಷೆ ಮಾಡುತ್ತಾರೆ. ಅದು ಸೀರಿಯಸ್ ಆಗಿದೆ’ ಎಂದರು ಕಿಚ್ಚ ಸುದೀಪ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.