ರಾಷ್ಟ್ರಪತಿಗೆ ಫನ್ನಿ ಪ್ರಶ್ನೆ ಕೇಳಿ ಕಾರ್ಯಕ್ರಮದಲ್ಲಿ ಹಾಸ್ಯ ಚಟಾಕಿ ಹಾರಿಸಿದ ಸಿದ್ದರಾಮಯ್ಯ
ಮೈಸೂರಿನಲ್ಲಿ ನಡೆದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರಮಹೋತ್ಸವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಸಿಎಂ ಸಿದ್ದರಾಮಯ್ಯ, ರಾಜ್ಯಪಾಲ ಗೆಹ್ಲೋಟ್ ಸೇರಿದಂತೆ ಇತರೆ ಗಣ್ಯರು ಭಾಗವಹಿಸಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಮೊದಲು ಭಾಷಣ ಮಾಡಿದರು. ಭಾಷಣ ಆರಂಭಕ್ಕೂ ಮುನ್ನ ಸಿದ್ದರಾಮಯ್ಯನವರು , You know kannada ಎಂದು ರಾಷ್ಟ್ರಪತಿ ಮುರ್ಮು ಅವರಿಗೆ ಕಾಮಿಡಿಯಾಗಿ ಪ್ರಶ್ನಿಸಿರುವ ಪ್ರಸಂಗ ನಡೆಯಿತು
ಮೈಸೂರು, ಸೆಪ್ಟೆಂಬರ್ 01): ಮೈಸೂರಿನಲ್ಲಿ ನಡೆದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರಮಹೋತ್ಸವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಸಿಎಂ ಸಿದ್ದರಾಮಯ್ಯ, ರಾಜ್ಯಪಾಲ ಗೆಹ್ಲೋಟ್ ಸೇರಿದಂತೆ ಇತರೆ ಗಣ್ಯರು ಭಾಗವಹಿಸಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಮೊದಲು ಭಾಷಣ ಮಾಡಿದರು. ಭಾಷಣ ಆರಂಭಕ್ಕೂ ಮುನ್ನ ಸಿದ್ದರಾಮಯ್ಯನವರು , You know kannada ಎಂದು ರಾಷ್ಟ್ರಪತಿ ಮುರ್ಮು ಅವರಿಗೆ ಕಾಮಿಡಿಯಾಗಿ ಪ್ರಶ್ನಿಸಿರುವ ಪ್ರಸಂಗ ನಡೆಯಿತು. ನಿಮಗೆ ಕನ್ನಡ ಬರುತ್ತಾ ಎಂದು ಸಿಎಂ ಹಾಸ್ಯ ಚಟಾಕಿ ಹಾರಿಸಿ ಐ ಸ್ಪೀಕ್ ಕನ್ನಡ ಎಂದು ಭಾಷಣ ಮಾಡಿದರು. ಈ ವೇಳೆ ಮುರ್ಮು ಸೇರಿದಂತೆ ವೇದಿಕೆ ಮೇಲಿದ್ದವರು ನಕ್ಕರು. ಇನ್ನು ಕೊನೆಗೆ ತಮ್ಮ ಭಾಷಣದಲ್ಲಿ ಮುರ್ಮು, ಎಲ್ಲಾ ಭಾಷೆಗಳು ನನಗೆ ಇಷ್ಟ.ಕನ್ನಡವು ಸ್ವಲ್ಪ ಸ್ವಲ್ಪ ಅರ್ಥ ಆಗುತ್ತೆ ಎಂದು ಸಿಎಂ ಪ್ರಶ್ನೆಗೆ ಹಾಸ್ಯವಾಗಿ ಉತ್ತರ ಕೊಟ್ಟರು.

