Kichcha Sudeep: ಹೈದರಾಬಾದ್ನಲ್ಲಿ ‘ವಿಕ್ರಾಂತ್ ರೋಣ’ ಸಕ್ಸಸ್ ಮೀಟ್; ತೆಲುಗು ಸ್ನೇಹಿತರಿಗೆ, ಪ್ರೇಕ್ಷಕರಿಗೆ ಕಿಚ್ಚನ ಧನ್ಯವಾದ
Vikrant Rona Success Meet: ತೆಲುಗಿನಲ್ಲಿ ‘ವಿಕ್ರಾಂತ್ ರೋಣ’ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಅದಕ್ಕಾಗಿ ಕಿಚ್ಚ ಸುದೀಪ್ ಮತ್ತು ಇಡೀ ಚಿತ್ರತಂಡದವರು ಹೈದರಾಬಾದ್ನಲ್ಲಿ ಸಕ್ಸಸ್ ಮೀಟ್ ಮಾಡಿದ್ದಾರೆ.
ಕನ್ನಡದ ‘ವಿಕ್ರಾಂತ್ ರೋಣ’ ಸಿನಿಮಾ ಹೊರರಾಜ್ಯಗಳಲ್ಲೂ ಜಯಭೇರಿ ಬಾರಿಸಿದೆ. ಅದಕ್ಕಾಗಿ ಅಲ್ಲಿನ ಪ್ರೇಕ್ಷಕರಿಗೆ ಕಿಚ್ಚ ಸುದೀಪ್ (Kichcha Sudeep) ಧನ್ಯವಾದ ತಿಳಿಸುತ್ತಿದ್ದಾರೆ. ಇಂದು (ಆಗಸ್ಟ್ 2) ಹೈದರಾಬಾದ್ನಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾದ ಸಕ್ಸಸ್ ಮೀಟ್ (Vikrant Rona Success Meet) ಮಾಡಲಾಗಿದೆ. ಈ ಚಿತ್ರಕ್ಕೆ ತೆಲುಗು ಚಿತ್ರರಂಗದ ಅನೇಕರು ಬೆಂಬಲ ನೀಡಿದ್ದಾರೆ. ರಾಜಮೌಳಿ, ರಾಮ್ ಗೋಪಾಲ್ ವರ್ಮಾ, ರಾಮ್ ಚರಣ್, ‘ಮೆಗಾ ಸ್ಟಾರ್’ ಚಿರಂಜೀವಿ, ಅಕ್ಕಿನೇನಿ ನಾಗಾರ್ಜುನ ಸೇರಿದಂತೆ ಅನೇಕರಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದಾರೆ. ತೆಲುಗು ಪ್ರೇಕ್ಷಕರು ಈ ಚಿತ್ರಕ್ಕೆ ತೋರಿಸಿದ ಪ್ರೀತಿಗೆ ‘ವಿಕ್ರಾಂತ್ ರೋಣ’ (Vikrant Rona) ತಂಡ ಫಿದಾ ಆಗಿದೆ. ನಿರ್ಮಾಪಕ ಜಾಕ್ ಮಂಜು, ನಿರ್ದೇಶಕ ಅನೂಪ್ ಭಂಡಾರಿ ಮುಂತಾದವರು ಸಕ್ಸಸ್ ಮೀಟ್ನಲ್ಲಿ ಭಾಗಿ ಆಗಿದ್ದಾರೆ.
Published on: Aug 02, 2022 01:12 PM