ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಹೆಲಿಕಾಪ್ಟರ್ ಇಳಿದು ಚಪ್ಪಲಿ ಧರಿಸದೇ ನಡೆದುಬಂದ ನಟ
ನವರಾತ್ರಿ ಉಪವಾಸ ಆಚರಣೆಯಲ್ಲಿರುವ ನಟ ಕಿಚ್ಚ ಸುದೀಪ್ ಅವರು ಸಂಪೂರ್ಣ ಭಕ್ತಿಭಾವದಿಂದ ಚಿತ್ರದುರ್ಗದಲ್ಲಿ ಮದಕರಿ ನಾಯಕ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಹೆಲಿಕಾಪ್ಟರ್ ಮೂಲಕ ಚಿತ್ರದುರ್ಗಕ್ಕೆ ಆಗಮಿಸಿದ ಸುದೀಪ್, ಪಾದರಕ್ಷೆಗಳನ್ನು ಧರಿಸದೆ ಬರಿಗಾಲಲ್ಲೇ ಕೆಳಗಿಳಿದು ನಡೆದು ಬಂದರು. ವೇದಿಕೆಯ ಮೇಲೆ ಬಂದಾಗಲೂ ಅವರು ಬರಿಗಾಲಲ್ಲೇ ಇದ್ದರು.
ನವರಾತ್ರಿ ಉಪವಾಸ ಆಚರಣೆಯಲ್ಲಿರುವ ನಟ ಕಿಚ್ಚ ಸುದೀಪ್ ಅವರು ಸಂಪೂರ್ಣ ಭಕ್ತಿಭಾವದಿಂದ ಚಿತ್ರದುರ್ಗದಲ್ಲಿ ಮದಕರಿ ನಾಯಕ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಹೆಲಿಕಾಪ್ಟರ್ ಮೂಲಕ ಚಿತ್ರದುರ್ಗಕ್ಕೆ ಆಗಮಿಸಿದ ಸುದೀಪ್, ಪಾದರಕ್ಷೆಗಳನ್ನು ಧರಿಸದೆ ಬರಿಗಾಲಲ್ಲೇ ಕೆಳಗಿಳಿದು ನಡೆದು ಬಂದರು. ವೇದಿಕೆಯ ಮೇಲೂ ಬರಿಗಾಲಲ್ಲೇ ಇದ್ದು ತಮ್ಮ ಭಕ್ತಿ ಹಾಗೂ ವ್ರತದ ನಿಷ್ಠೆಯನ್ನು ಮೆರೆದರು. ಅಲ್ಲಿಂದ ನೇರವಾಗಿ ಪ್ರಸಿದ್ಧ ಮಾದಾರ ಚನ್ನಯ್ಯ ಮಠಕ್ಕೆ ಭೇಟಿ ನೀಡಿದ ಅವರು, ಮಾದಾರ ಚನ್ನಯ್ಯ ಶ್ರೀಗಳ ದರ್ಶನ ಹಾಗೂ ಆಶೀರ್ವಾದ ಪಡೆದುಕೊಂಡರು. ತಮ್ಮ ನೆಚ್ಚಿನ ನಟನನ್ನು ಕಣ್ಣುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮುಗಿಬಿದ್ದರು. ಸುದೀಪ್ ಬರುತ್ತಿದ್ದಂತೆ ಕೈಯಲ್ಲಿ ಬಾವುಟಗಳನ್ನು ಹಿಡಿದು ‘ಕಿಚ್ಚ.. ಕಿಚ್ಚ..’ ಎಂದು ಜೈಕಾರ ಕೂಗಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
