‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಮಾತಿನಿಂದಲೇ ಮಂಜ ಎಡವಟ್ಟು ಮಾಡಿಕೊಂಡಿದ್ದಾರೆ. ಅತಿಯಾಗಿ ಮಾತನಾಡಿದ್ದಕ್ಕೆ ಅವರಿಗೆ ಶಿಕ್ಷೆ ಆಗಿದೆ. ಅಶ್ಲೀಲ ಪದ ಬಳಸಿದ ಕಾರಣಕ್ಕೆ ಅವರನ್ನು ಎಲಿಮಿನೇಟ್ ಮಾಡಲಾಗಿದೆ. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮಂಜ ಅವರು ಸುದೀಪ್ ಎದುರು ನಿಂತು ಕಣ್ಣೀರು ಹಾಕಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಮಾತಿನಿಂದಲೇ ಮಂಜ ಎಡವಟ್ಟು ಮಾಡಿಕೊಂಡಿದ್ದಾರೆ. ಅತಿಯಾಗಿ ಮಾತನಾಡಿದ್ದಕ್ಕೆ ಅವರಿಗೆ ಶಿಕ್ಷೆ ಆಗಿದೆ. ಅಶ್ಲೀಲ ಪದ ಬಳಸಿದ ಕಾರಣಕ್ಕೆ ಅವರನ್ನು ಎಲಿಮಿನೇಟ್ ಮಾಡಲಾಗಿದೆ. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮಂಜ ಅವರು ಕಿಚ್ಚ ಸುದೀಪ್ ಎದುರಲ್ಲಿ ನಿಂತು ಕಣ್ಣೀರು ಹಾಕಿದ್ದಾರೆ. ‘ನಾನು ತಪ್ಪು ಮಾಡಿಬಿಟ್ಟೆ ಸರ್. ನೀವು ನನಗೆ ತುಂಬಾ ಅವಕಾಶ ಕೊಟ್ಟಿದ್ರಿ. ನಿಮ್ಮ ಕಣ್ಣಲ್ಲಿ ಕೂಡ ನಾನು ನೀರು ಹಾಕಿಸಿದೆ. ನೀವು ನನ್ನ ಕನಸು. ನನ್ನ ಕನಸಿನ ಕಣ್ಣಲ್ಲಿ ನೀರು ಹಾಕಿಸಿಬಿಟ್ಟೆ ನಾನು’ ಎಂದು ಮಂಜ ಅತ್ತಿದ್ದಾರೆ. ‘ಆಗಿರುವ ತಪ್ಪನ್ನು ತಿದ್ದಿಕೊಳ್ಳಿ. ಪ್ರತಿಭಾವಂತರು ನೀವು’ ಎಂದು ಸುದೀಪ್ ಅವರು ಸಮಾಧಾನ ಮಾಡಿದ್ದಾರೆ. ಅಕ್ಟೋಬರ್ 11ರ ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

