ಬಿಗ್ ಬಾಸ್ ಮನೆಯಿಂದ ಮಂಜ ಔಟ್: ಅಶ್ಲೀಲವಾಗಿ ಮಾತಾಡಿದ್ದಕ್ಕೆ ಶಿಕ್ಷೆ
‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಮಂಜ ಅವರು ತೀರಾ ಅಶ್ಲೀಲವಾಗಿ ಮಾತನಾಡಿದ್ದರು. ಅದಕ್ಕೆ ಎಲ್ಲರಿಂದ ವಿರೋಧ ವ್ಯಕ್ತವಾಗಿತ್ತು. ಯಶಸ್, ಸೌಂದರ್ಯಾ ಶೆಟ್ಟಿ ಮುಂತಾದವರ ಜೊತೆ ಜಗಳ ಆಡುವಾಗ ಮಂಜ ಕೀಳು ಮಟ್ಟದ ಭಾಷೆ ಬಳಸಿದ್ದರು. ಅದಕ್ಕೆ ಈಗ ತಕ್ಕ ಶಿಕ್ಷೆ ನೀಡಲಾಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಮಂಜ ಅವರು ತೀರಾ ಅಶ್ಲೀಲವಾಗಿ ಮಾತನಾಡಿದ್ದರು. ಅದಕ್ಕೆ ಎಲ್ಲರಿಂದ ವಿರೋಧ ವ್ಯಕ್ತವಾಗಿತ್ತು. ಯಶಸ್, ಸೌಂದರ್ಯಾ ಶೆಟ್ಟಿ ಮುಂತಾದವರ ಜೊತೆ ಜಗಳ ಆಡುವಾಗ ಮಂಜ ಕೀಳು ಮಟ್ಟದ ಭಾಷೆ ಬಳಸಿದ್ದರು. ಅದಕ್ಕೆ ಈಗ ತಕ್ಕ ಶಿಕ್ಷೆ ನೀಡಲಾಗಿದೆ. ಈ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ‘ಈ ಮನೆಗೆ ಅದರದ್ದೇ ಆದ ನಿಯಮಗಳಿವೆ. ಹಲವು ಬಾರಿ ಎಚ್ಚರಿಕೆ ನೀಡಿದ ನಂತರವೂ ಅಸಭ್ಯ ಮಾತುಗಳಿಂದ ಮನೆಯ ಸದಸ್ಯರ ವ್ಯಕ್ತಿತ್ವದ ಬಗ್ಗೆ ನಿಂದಿಸಿದ್ದೀರಿ. ಇದನ್ನು ಬಿಗ್ ಬಾಸ್ ಸಹಿಸುವುದಿಲ್ಲ. ಮನೆಯ ಮೂಲ ನಿಯಮವನ್ನು ಉಲ್ಲಂಘಿಸಿದ ಕಾರಣದಿಂದ ನಿಮ್ಮನ್ನು ಈ ಮನೆಯಿಂದ ಹೊರಗೆ ಕಳಿಸಲಾಗುತ್ತಿದೆ’ ಎಂದು ಮಂಜನಿಗೆ ಬಿಗ್ ಬಾಸ್ ಆದೇಶ ನೀಡಿದ್ದಾರೆ. ಮುಖ್ಯದ್ವಾರ ಓಪನ್ ಆಗಿದ್ದು, ಆ ಮೂಲಕ ಮಂಜ ಹೊರಗೆ ಹೋಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

