ಸುದೀಪ್​ ಅವರನ್ನೇ ಮ್ಯಾನ್ಯುಪಲೇಷನ್ ಮಾಡಲು ಹೋದ ಜಾನ್ವಿ; ಆಮೇಲೇನಾಗುತ್ತೆ ಗೊತ್ತಲ್ಲ

Edited By:

Updated on: Nov 15, 2025 | 6:43 PM

Bigg Boss Kannada Promoಕಿಚ್ಚ ಸುದೀಪ್ ಅವರು ಪ್ರತಿ ಬಾರಿ ಹಲವು ವಿಷಯಗಳನ್ನು ಇಟ್ಟುಕೊಂಡು ಮಾತನಾಡುತ್ತಾರೆ. ಈ ಶನಿವಾರವೂ ಅದು ಮುಂದುವರಿಯಲಿದೆ ಎಂಬುದು ಸ್ಪಷ್ಟವಾಗಿದೆ. ಜಾನ್ವಿ ಅವರಿಗೆ ವಿಶೇಷ ಕ್ಲಾಸ್ ಇರಲಿದೆ. ಅದಕ್ಕೆ ಕಾರಣ ಏನು? ಆ ಬಗ್ಗೆ ಇಲ್ಲಿದೆ ವಿವರ.

ಈ ಮೊದಲು ಅಶ್ವಿನಿ ಗೌಡ ಹಾಗೂ ಜಾನ್ವಿ ಅವರು ಚೇಂಜಿಂಗ್ ರೂಂನಲ್ಲಿ ಮೈಕ್ ಇಲ್ಲದೆ ಮಾತನಾಡಿದ್ದರು. ಈ ವಿಚಾರವನ್ನು ಸ್ವತಃ ಅಶ್ವಿನಿ ಗೌಡ ಅವರು ಹೇಳಿದ್ದರು. ಜಾನ್ವಿ ಹಾಗೂ ಅಶ್ವಿನಿ ಜಗಳ ಆಡಿಕೊಂಡಿದ್ದರು. ಇದು ನಾಟಕವಾಗಿತ್ತಂತೆ. ಚೇಂಜಿಂಗ್​ ರೂಂನಲ್ಲಿ ಮೈಕ್ ಇಲ್ಲದೆ ಅಶ್ವಿನಿ ಹಾಗೂ ಜಾನ್ವಿ ಅವರು ಈ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದರಂತೆ. ಈ ವಿಷಯವನ್ನು ಅಶ್ವಿನಿ ಅವರು ಜಾನ್ವಿ ವಿರುದ್ಧ ಸಿಟ್ಟಾದಾಗ ಹೇಳಿದ್ದರು.

ಈ ವಿಷಯದಲ್ಲಿ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಜಾನ್ವಿ ಅವರು ವಿಷಯ ಬದಲಿಸಲು ಹೋದರು. ಇದನ್ನು ಸುದೀಪ್ ಅವರು ಮ್ಯಾನ್ಯುಪಲೇಷನ್ ಎಂದು ಕರೆದರು ಮತ್ತು ಕ್ಲಾಸ್ ತೆಗೆದುಕೊಂಡರು. ಆ ಎಪಿಸೋಡ್ ಇಂದು ರಾತ್ರಿ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More