ರಾಶಿಕಾ ಜೊತೆಗಿನ ವಿಡಿಯೋ ಹಾಕಬೇಡಿ: ಸುದೀಪ್​​ಗೆ ಮನವಿ ಮಾಡಿದ ಸೂರಜ್

Updated on: Nov 02, 2025 | 2:52 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋನ ನ.2ರ ಸಂಚಿಕೆಯಲ್ಲಿ ರಾಶಿಕಾ ಶೆಟ್ಟಿ ಹಾಗೂ ಸೂರಜ್ ಅವರ ವಿಷಯ ಹೈಲೈಟ್ ಆಗಲಿದೆ. ಹೊಸ ಪ್ರೋಮೋವನ್ನು ‘ಜಿಯೋ ಹಾಟ್​ಸ್ಟಾರ್’ ಹಂಚಿಕೊಂಡಿದೆ. ಸೂರಜ್ ಹಾಗೂ ರಾಶಿಕಾ ನಡುವೆ ಏನೆಲ್ಲ ಸಂಭಾಷಣೆಗಳು ನಡೆದಿವೆ ಎಂಬುದನ್ನು ಸುದೀಪ್ ಹೇಳಿದ್ದಾರೆ.

ಬಿಗ್ ಬಾಸ್ ಮನೆಯೊಳಗೆ ನಟಿ ರಾಶಿಕಾ ಶೆಟ್ಟಿ ಅವರು ಸೂರಜ್ ಸಿಂಗ್ (Suraj Singh) ಜೊತೆಗೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ‘ಸೂಪರ್ ಸಂಡೇ ವಿತ್ ಬಾದ್​ಷಾ ಸುದೀಪ’ ಸಂಚಿಕೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ಆಗಿದೆ. ಸೂರಜ್ ಮತ್ತು ರಾಶಿಕಾ ನಡುವೆ ಏನೆಲ್ಲ ಸಂಭಾಷಣೆಗಳು ನಡೆದಿವೆ ಎಂಬುದನ್ನು ಸುದೀಪ್ ಅವರು ಹೇಳಿದ್ದಾರೆ. ಆ ರೀತಿ ಏನೂ ಇಲ್ಲ ಎಂದು ಸೂರಜ್ ಅವರು ತಳ್ಳಿ ಹಾಕಲು ಪ್ರಯತ್ನಿಸಿದ್ದಾರೆ. ‘ಹಾಗಾದ್ರೆ ವಿಡಿಯೋ ಹಾಕಲಾ’ ಎಂದು ಕಿಚ್ಚ ಸುದೀಪ್ (Kichcha Sudeep) ಪ್ರಶ್ನೆ ಮಾಡಿದ್ದಾರೆ. ‘ಬೇಡ ಬೇಡ’ ಎಂದು ಸೂರಜ್ ಅವರು ಹೇಳಿದ್ದಾರೆ. ‘ನಿಮಗೆ ಏನಾದರೂ ಹೇಳೋಕೆ ಇದೆಯಾ’ ಎಂದು ಸುದೀಪ್ ಕೇಳಿದ ಪ್ರಶ್ನೆಗೆ ರಾಶಿಕಾ ಶೆಟ್ಟಿ (Rashika Shetty) ಅವರು ಏನೂ ಉತ್ತರ ನೀಡಿದೇ ಮೌನಕ್ಕೆ ಜಾರಿದ್ದಾರೆ. ನವೆಂಬರ್ 2ರ ಸಂಚಿಕೆಯಲ್ಲಿ ರಾಶಿಕಾ ಶೆಟ್ಟಿ ಮತ್ತು ಸೂರಜ್ ಅವರ ವಿಷಯವೇ ಹೈಲೈಟ್ ಆಗಲಿದೆ. ಅದರ ಪ್ರೋಮೋವನ್ನು ‘ಜಿಯೋ ಹಾಟ್​ಸ್ಟಾರ್’ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Nov 02, 2025 02:51 PM
Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More