ಈ ವಾರ ಬಿಗ್ ಬಾಸ್​​ನಲ್ಲಿ ಸುದೀಪ್ ಚರ್ಚೆ ಮಾಡಬೇಕಿರುವ ವಿಷಯಗಳ ಪಟ್ಟಿ ದೊಡ್ಡದಿದೆ

Updated on: Jan 03, 2026 | 9:04 AM

ಬಿಗ್ ಬಾಸ್ ಕನ್ನಡ ಸೀಸನ್ 12ರ ಕೊನೆಯ ವಾರಗಳು ಚಾಲ್ತಿಯಲ್ಲಿ ಇವೆ. ಈ ವಾರ ಸುದೀಪ್ ಅವರು ಆಗಮಿಸುತ್ತಿದ್ದಾರೆ. ಅವರು ಹಲವು ವಿಷಯಗಳನ್ನು ಚರ್ಚೆ ಮಾಡಲಿದ್ದಾರೆ. ಈ ವಾರ ಅವರು ಚರ್ಚೆ ಮಾಡಬೇಕಿರುವ ವಿಷಯ ಕೂಡ ದೊಡ್ಡದು ಇದೆ. ಆ ಬಗ್ಗೆ ಇಲ್ಲಿದೆ ವಿವರ.

ಕಿಚ್ಚ ಸುದೀಪ್ ಅವರು ಕಳೆದ ವಾರ ಬಿಗ್ ಬಾಸ್ ನಡೆಸಿಕೊಟ್ಟಿರಲಿಲ್ಲ. ಅವರು ಈ ವಾರ ಬಿಗ್ ಬಾಸ್​ಗೆ ಮರಳುತ್ತಿದ್ದಾರೆ. ಅವರು ಚರ್ಚೆ ಮಾಡಬೇಕಿರುವ ವಿಷಯಗಳ ಪಟ್ಟಿ ದೊಡ್ಡದಿದೆ. ಈ ವಾರದ ಕ್ಯಾಪ್ಟನ್ಸಿ ಟಾಸ್ಕ್​​ನಲ್ಲಿ ಸಾಕಷ್ಟು ಏರಿಳಿತ ಇತ್ತು. ಈ ಬಗ್ಗೆ ಇಂದು ಚರ್ಚೆ ಆಗುವ ಸಾಧ್ಯತೆ ಇದೆ. ಮನೆಯವರಿಂದ ಸಿಕ್ಕ ಹಿಂಟ್ ಬಳಿಕ ಕಾವ್ಯಾ ಬದಲಾಗಿದ್ದಾರೆ. ಅದು ಕೂಡ ಚರ್ಚೆ ಆಗಬಹುದು. ಗಿಲ್ಲಿ ನಟ ಅವರು ಕಾವ್ಯಾಗೆ ಫೇವರ್ ಮಾಡಿದ ಆರೋಪ ಇದೆ. ಆ ವಿಷಯ ಚರ್ಚೆ ಆಗಬಹುದು. ಇದರ ಜೊತೆ ಒಬ್ಬರು ಎಲಿಮಿನೇಟ್ ಕೂಡ ಆಗಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jan 03, 2026 09:03 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More