ಕಾರ್ ರೇಸ್ ಎಂಜಾಯ್ ಮಾಡಿದ ಕಿಚ್ಚ ಸುದೀಪ್; ಹೇಗಿತ್ತು ಹೊಸ ಅನುಭವ?

Updated on: Feb 24, 2026 | 9:37 PM

ಇಂಡಿಯನ್ ರೇಸಿಂಗ್ ಫೆಸ್ಟಿವಲ್ ಗೋವಾದಲ್ಲಿ ತನ್ನ ಚೊಚ್ಚಲ ಆವೃತ್ತಿಯನ್ನು ಆಯೋಜಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಈ ಮೂಲಕ ಗೋವಾ ರಾಜ್ಯ ಹೈ-ಆಕ್ಟೇನ್ ಫಾರ್ಮುಲಾ ಸ್ಟ್ರೀಟ್ ರೇಸ್ ವೀಕೆಂಡ್​ಗೆ ಸಾಕ್ಷಿಯಾಗಿದೆ. ಇದರಲ್ಲಿ ನಟ ಕಿಚ್ಚ ಸುದೀಪ್ ಅವರ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡ ಭಾಗಿ ಆಗಿದೆ.

ಇಂಡಿಯನ್ ರೇಸಿಂಗ್ ಫೆಸ್ಟಿವಲ್ (Indian Racing Festival) ಗೋವಾದಲ್ಲಿ ತನ್ನ ಚೊಚ್ಚಲ ಆವೃತ್ತಿಯನ್ನು ಆಯೋಜಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಈ ಮೂಲಕ ಗೋವಾ ರಾಜ್ಯ ಹೈ-ಆಕ್ಟೇನ್ ಫಾರ್ಮುಲಾ ಸ್ಟ್ರೀಟ್ ರೇಸ್ ವೀಕೆಂಡ್​ಗೆ ಸಾಕ್ಷಿಯಾಗಿದೆ. ಇದರಲ್ಲಿ ನಟ ಕಿಚ್ಚ ಸುದೀಪ್ ಅವರ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ (Kichchas Kings Bengaluru) ತಂಡ ಕೂಡ ಭಾಗಿಯಾಗಿದೆ. ‘ಇದು ಒಳ್ಳೆಯ ಅನುಭವ. ನಾವು ಮನೆಯಲ್ಲಿ ಕುಳಿತು ರೇಸ್ ನೋಡೋದಕ್ಕೂ ಇಲ್ಲಿ ಬಂದು ನೋಡೋದಕ್ಕೂ ಬಹಳ ವ್ಯತ್ಯಾಸ ಇದೆ. ನಮ್ಮ ತಂಡ ಬಹಳ ಚೆನ್ನಾಗಿ ಮಾಡಿದರು. ಅದರ ಬಗ್ಗೆ ನನಗೆ ತುಂಬ ಖುಷಿ ಇದೆ. ನನಗೆ ರೇಸಿಂಗ್ ಹೊಸದು. ಟೀಮ್ ತೆಗೆದುಕೊಳ್ಳುವಾಗ ನನಗೆ ಹೆಚ್ಚು ಮಾಹಿತಿ ಇರಲಿಲ್ಲ. ಈಗ ನಾನು ತುಂಬಾ ಎಂಜಾಯ್ ಮಾಡುತ್ತಿದ್ದೇನೆ. ಇಲ್ಲಿ ತಯಾರಿ ಬಹಳ ಚೆನ್ನಾಗಿ ಮಾಡಿದ್ದಾರೆ’ ಎಂದು ಸುದೀಪ್ (Sudeep) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More