ಲವ್ ಮಾಡೋದು ಬಿಟ್ಟು ಆಟವಾಡು: ಸುದೀಪ್ ಎದುರಲ್ಲೇ ಸೌಂದರ್ಯಾಗೆ ಕಿರಣ್ ಟೀಕೆ
ಯಶಸ್ ಜೊತೆ ಸೌಂದರ್ಯಾ ಶೆಟ್ಟಿ ಆಪ್ತವಾಗಿ ಕಾಣಿಸಿಕೊಂಡ ಕಾರಣದಿಂದ ಆಗಾಗ ಚರ್ಚೆಗೆ ಗುರಿ ಆಗುತ್ತಾರೆ. ಅದೇ ವಿಚಾರವನ್ನು ಇಟ್ಟುಕೊಂಡು ಅವರನ್ನು ಕಿರಣ್ ಶಾಸ್ತ್ರಿ ಟೀಕಿಸಿದ್ದಾರೆ. ಆಟ ಆಡು ಎಂದರೆ ಲವ್ ಮಾಡುತ್ತಾ ಕುಳಿತುಕೊಳ್ಳಲು ಬಂದಿದ್ದೀಯಾ? ಮೊದಲು ಲವ್ ಮಾಡೋದು ಬಿಟ್ಟು ಆಟ ಆಡು’ ಎಂದು ಕಿರಣ್ ಶಾಸ್ತ್ರಿ ಅವರು ಹೇಳಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ‘ಸೂಪರ್ ಸಂಡೇ ವಿತ್ ಸುದೀಪ’ ಸಂಚಿಕೆ ಯಾವಾಗಲೂ ಮಸ್ತ್ ಆಗಿರುತ್ತದೆ. ಸುದೀಪ್ ಅವರು ಬಿಗ್ ಬಾಸ್ ಸ್ಪರ್ಧಿಗಳಿಗೆ ಹಲವು ಬಗೆಯ ಟಾಸ್ಕ್ ನೀಡುತ್ತಾರೆ. ಈ ವಾರ ಅವರು ಎಲ್ಲರ ಪಾಸಿಟಿವ್ ಮತ್ತು ನೆಗೆಟಿವ್ ಅಂಶಗಳನ್ನು ಗುರುತಿಸಿ ಹೇಳುವಂತೆ ಸ್ಪರ್ಧಿಗಳಿಗೆ ತಿಳಿಸಿದ್ದಾರೆ. ಹಾಗಾಗಿ ಕಿಚ್ಚ ಸುದೀಪ್ ಅವರ ಎದುರಲ್ಲೇ ಎಲ್ಲರೂ ಫಿಲ್ಟರ್ ಇಲ್ಲದೇ ಮಾತನಾಡುವ ಸಂದರ್ಭ ಬಂದಿದೆ. ಸೌಂದರ್ಯಾ ಶೆಟ್ಟಿ ಅವರು ಯಶಸ್ ಜೊತೆ ಆಪ್ತವಾಗಿ ಕಾಣಿಸಿಕೊಂಡ ಕಾರಣದಿಂದ ಆಗಾಗ ಚರ್ಚೆಗೆ ಗುರಿ ಆಗುತ್ತಾರೆ. ಅದೇ ವಿಚಾರವನ್ನು ಇಟ್ಟುಕೊಂಡು ಅವರನ್ನು ಕಿರಣ್ ಶಾಸ್ತ್ರಿ ಟೀಕಿಸಿದ್ದಾರೆ. ಆಟ ಆಡು ಎಂದರೆ ಲವ್ ಮಾಡುತ್ತಾ ಕುಳಿತುಕೊಳ್ಳಲು ಬಂದಿದ್ದೀಯಾ? ಮೊದಲು ಲವ್ ಮಾಡೋದು ಬಿಟ್ಟು ಆಟವಾಡು’ ಎಂದು ಕಿರಣ್ ಶಾಸ್ತ್ರಿ ಅವರು ಹೇಳಿದ್ದಾರೆ. ನವೆಂಬರ್ 1ರ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
