ಚಾಲಾಕಿ ಚಾಲಕ! ಊರಿಗೆ ಹೋಗಲು ವಾಹನಗಳು ಸಿಕ್ಕಿಲ್ಲವೆಂದು ಬಸ್ಸನ್ನೇ ಕದ್ದೊಯ್ದ: ಸಿಸಿಟಿವಿ ವಿಡಿಯೋ ನೋಡಿ

Edited By:

Updated on: Mar 21, 2026 | 10:13 AM

ಕೆಲಸದಿಂದ ವಜಾಗೊಂಡಿದ್ದಾಗಿದೆ. ಇನ್ನು ಊರಿಗೆ ಹೋಗಬೇಕು. ಆದ್ರೆ ವಾಹನಗಳು ಯಾವುದೂ ಸಿಗ್ತಿಲ್ಲ, ಏನು ಮಾಡುವುದು? ಎಂದು ಚಿಂತಿಸಿದ ಕೆಕೆಆರ್​ಟಿಸಿ ಚಾಲಕನೊಬ್ಬ ಸಂಸ್ಥೆಯ ಬಸ್ಸನ್ನೇ ಕದ್ದೊಯ್ದ ವಿಚಿತ್ರ ಪ್ರಕರಣ ಯಾದಗಿರಿ ಜಿಲ್ಲೆಯ ಸೈದಾಪುರ ಪಟ್ಟಣದಲ್ಲಿ ನಡೆದಿದೆ. ಬಸ್ ಕದ್ದೊಯ್ದ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ವೈರಲ್ ಆಗುತ್ತಿದೆ.

ಯಾದಗಿರಿ, ಮಾರ್ಚ್: ಊರಿಗೆ ಹೋಗಲು ವಾಹನ ಸಿಗದಿದ್ದ ಕಾರಣ ಚಾಲಕನೊಬ್ಬ ಬಸ್ಸನ್ನೇ ಕದ್ದೊಯ್ದ ವಿಲಕ್ಷಣ ಘಟನೆಗೆ ಯಾದಗಿರಿ ಜಿಲ್ಲೆ ಸಾಕ್ಷಿಯಾಗಿದೆ. ಯಾದಗಿರಿಯ ಸೈದಾಪುರ ಪಟ್ಟಣದಿಂದ ಬಸ್ ಕದ್ದೊಯ್ಯಲಾಗಿದ್ದು, ಘಟನೆಯ ಸಿಸಿಟಿವಿ ದೃಶ್ಯಗಳು ಇದೀಗ ಬಯಲಾಗಿವೆ. ಕೆಕೆಆರ್​ಟಿಸಿಗೆ (KKRTC) ಸೇರಿದ ಬಸ್‌ ಅನ್ನು ಅದೇ ಸಂಸ್ಥೆಯಲ್ಲಿ ಚಾಲಕ ಕಂ ನಿರ್ವಾಹಕರಾಗಿದ್ದ ಮಹಿಪಾಲರೆಡ್ಡಿ ಕದ್ದೊಯ್ದಿದ್ದಾರೆ. ಕರ್ತವ್ಯ ಲೋಪದ ಹಿನ್ನೆಲೆ ಮಹಿಪಾಲರೆಡ್ಡಿಯನ್ನು ವಜಾಗೊಳಿಸಲಾಗಿತ್ತು.

ಮಾರ್ಚ್ 19ರಂದು ಸೈದಾಪುರ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ ಅನ್ನು ಮಹಿಪಾಲರೆಡ್ಡಿ ತೆಗೆದುಕೊಂಡು ಹೋಗಿದ್ದಾರೆ. ಸ್ವಗ್ರಾಮ ರಾಚನಳ್ಳಿಗೆ ತೆರಳಲು ಯಾವುದೇ ವಾಹನ ಸಿಗದಿದ್ದರಿಂದ ಈ ಕೃತ್ಯ ಎಸಗಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಬಸ್ ಕದ್ದೊಯ್ದ ಬಳಿಕ ಗ್ರಾಮದಲ್ಲಿರುವ ದೇವಸ್ಥಾನದ ಬಳಿ ನಿಲ್ಲಿಸಿ, ಅಲ್ಲಿಂದ ತೆರಳಿದ್ದರು. ಬಳಿಕ ಪ್ರಕರಣ ಬೆಳಕಿಗೆ ಬಂದಂತೆ ಪೊಲೀಸರು ತನಿಖೆ ನಡೆಸಿ ಬಸ್‌ ಅನ್ನು ವಾಪಸ್ ಪಡೆದಿದ್ದಾರೆ. ಈ ಸಂಬಂಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಘಟನೆಯ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us