ರಾಜ್ಯ, ದೇಶಕ್ಕೆ ಊಹಿಸಲಾಗದ ದುಃಖ ಬರಲಿದೆ, ಜನವರಿ ಒಳಗೆ ದೊಡ್ಡ ಗಂಡಾಂತರ: ಕೋಡಿ ಶ್ರೀ ಭಯಾನಕ ಭವಿಷ್ಯ

Edited By:

Updated on: Jun 21, 2025 | 5:57 PM

ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ: ಕೋಡಿ ಶ್ರೀಗಳು ನೀಡಿದ ಭವಿಷ್ಯವಾಣಿಯು ಕರ್ನಾಟಕ ಮತ್ತು ಭಾರತದ ಮೇಲೆ ಆತಂಕದ ನೆರಳನ್ನು ಉಂಟುಮಾಡಿದೆ. ಅವರ ಪ್ರಕಾರ, ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಹೆಚ್ಚಾಗಲಿದೆ ಮತ್ತು ದೇಶಕ್ಕೆ ಜನವರಿ ಒಳಗೆ ಭಾರೀ ದುಃಖವು ಬರಲಿದೆ. ಮೇಘಸ್ಪೋಟ, ಭೂಕುಸಿತ ಮತ್ತು ಇತರ ಪ್ರಕೃತಿ ವಿಕೋಪಗಳ ಸಾಧ್ಯತೆಗಳನ್ನು ಅವರು ಸೂಚಿಸಿದ್ದಾರೆ.

ಹಾಸನ, ಜೂನ್ 21: ಕರ್ನಾಟಕ ಹಾಗೂ ಭಾರತಕ್ಕೆ ಜನವರಿ ಒಳಗೆ ಭಾರಿ ದೊಡ್ಡ ಗಂಡಾಂತರ ಇದೆ. ಯಾರೂ ಊಹಿಸಿರದ ದುಃಖ ಬರಲಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು ಮೇಘಸ್ಫೋಟ, ಜಲಪ್ರಳಯ ಹಾಗೂ ವಾಯುವಿನಿಂದ ಆಪತ್ತು ಬರುವ ಬಗ್ಗೆ ಮೊದಲೇ ಹೇಳಿದ್ದೆ. ವಿಮಾನ ಅಪಘಾತ ಸೇರಿದಂತೆ ಕೆಲವು ಆಪತ್ತುಗಳು ಸಂಭವಿಸಿವೆ. ಮುಂದೆ ಇನ್ನೊಂದು ದೊಡ್ಡ ಮೇಘಸ್ಫೋಟ ಸಂಭವಿಸಲಿದೆ. ನಿರೀಕ್ಷೆಗೂ ಮೀರಿದ ದುಃಖ ಬರಲಿದೆ ಎಂದು ಮುನ್ಸೂಚನೆ ನೀಡಿದರು.

ಮನುಷ್ಯ ಓಡಾಡುತ್ತಲೇ ಸಾಯುತ್ತಾನೆ. ಜನಜೀವನ ಅಸ್ತಿರಗೊಳ್ಳಲಿದೆ ಎಂದು ಹೇಳಿದ್ದೆ. ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದು ಈಗ ಕಂಡುಬರುತ್ತಿದೆ. ಈ ಅಸ್ಥಿರತೆ ಹೆಚ್ಚಾಗಲಿದೆ ಎಂದು ಸ್ವಾಮೀಜಿ ಹೇಳಿದರು.

‘‘ಸೂಳೆಯ ಮಗನುಟ್ಟಿ ಆಳುವನು ಮುನಿಪುರವ ಯುದ್ಧವಿಲ್ಲದೆ ಮಡಿಯೇ ಪುರವೆಲ್ಲ ಕೂಳಾದೀತು’’ ಎಂದು ಮಾರ್ಮಿಕವಾಗಿ ನುಡಿದ ಸ್ವಾಮೀಜಿ, ಇದನ್ನು ಬರೆದಿಟ್ಟುಕೊಂಡಿರಿ. ಇದಕ್ಕೆ ಪರಿಹಾರ ಆಮೇಲೆ ಸೂಚಿಸುವೆ ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jun 21, 2025 03:11 PM