Loading video

ರೀಲ್ಸ್​​ ನೋಡುತ್ತಾ ಸರ್ಕಾರಿ ಬಸ್ ​ಚಲಾಯಿಸಿದ್ದ ಚಾಲಕ ಅಮಾನತು

| Updated By: ವಿವೇಕ ಬಿರಾದಾರ

Updated on: Jan 31, 2025 | 11:52 AM

ಕೋಲಾರದಲ್ಲಿ ಬಸ್ ಚಾಲಕನೊಬ್ಬ ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಾ ಬಸ್ ಚಾಲನೆ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಬಗ್ಗೆ ಟಿವಿ9 ವರದಿ ಮಾಡಿದ ನಂತರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಅಧಿಕಾರಿಗಳು ಚಾಲಕ ಶ್ರೀನಿವಾಸ್ ಅವರನ್ನು ತಕ್ಷಣ ಅಮಾನತುಗೊಳಿಸಿದ್ದಾರೆ. ಬೇಜವಾಬ್ದಾರಿಯಿಂದ ವಾಹನ ಚಾಲನೆ ಮಾಡಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಕೋಲಾರ, ಜನವರಿ 31: ಮೊಬೈಲ್​ನಲ್ಲಿ ರೀಲ್ಸ್ ನೋಡುತ್ತಾ ಬಸ್ ಚಾಲನೆ ಮಾಡಿದ ಚಾಲಕನನ್ನು ಅಮಾನತು ಮಾಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಕೋಲಾರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್ ಆದೇಶ ಹೊರಡಿಸಿದ್ದಾರೆ. ಶ್ರೀನಿವಾಸ್ ಅಮಾನತ್ತಾದ ಸರ್ಕಾರಿ ಬಸ್ ಚಾಲಕ.

ಬಸ್ ಚಾಲಕನ ಮೊಬೈಲ್ ಪ್ರೇಮ ಕುರಿತು ಟಿವಿ9ನಲ್ಲಿ ವರದಿ ಪ್ರಸಾರವಾಗಿತ್ತು. ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಹಿರಿಯ ಅಧಿಕಾರಿಗಳು ಚಾಲಕ ಶ್ರೀನಿವಾಸ್​ರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.

ನಡೆದಿದ್ದು ಏನು?

ಕೋಲಾರ ವಿಭಾಗದ ಕೋಲಾರ-ಪಾವಗಡ ಮಾರ್ಗದ ಬಸ್​ ಚಾಲಕ ಬಸ್​ ಚಾಲನೆ ಮಾಡುತ್ತಲೇ ಮೊಬೈಲ್​ನಲ್ಲಿ ರೀಲ್ಸ್​ ನೋಡುತ್ತಿದ್ದರು. ಚಾಲಕ್​ ಶ್ರೀನಿವಾಸ್​ ರೀಲ್ಸ್​ ನೋಡುತ್ತಿದ್ದನ್ನು ವಿಡಿಯೋ ಮಾಡಿ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಚಾಲಕನ ಬೇಜಾಬ್ದಾರಿತನ ಸುದ್ದಿ ಟಿವಿ9ನಲ್ಲಿ ಪ್ರಸಾರವಾಗಿತ್ತು. ಟಿವಿ9ನಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಚಾಲಕ ಶ್ರೀನಿವಾಸ್​​​ ಅವರನ್ನು ಪತ್ತೆ ಹಚ್ಚಿದ್ದಾರೆ.

Published on: Jan 31, 2025 11:40 AM