ಕೊಪ್ಪಳ ಗವಿಸಿದ್ದಪ್ಪ ಕೊಲೆಗೆ ಮತ್ತೊಂದು ಟ್ವಿಸ್ಟ್: ಸ್ಫೋಟಕ ಅಂಶ ಬಿಚ್ಚಿಟ್ಟ ತಾಯಿ!
ಗವಿಸಿದ್ದಪ್ಪ ನಾಯಕನ ಕೊಲೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಪ್ರೀತಿ ವಿಚಾರದಿಂದ ಉಂಟಾದ ಕೊಲೆಯಲ್ಲಿ, ಮೃತ ಗವಿಸಿದ್ದಪ್ಪ ಸೇರಿದಂತೆ ಅವರ ತಂದೆ, ತಾಯಿ ಮತ್ತು ಸಹೋದರಿ ವಿರುದ್ಧ ಕೊಪ್ಪಳ ಪೊಲೀಸರು ಪೋಕ್ಸೋ ಕೇಸ್ ದಾಖಲಾಗಿದೆ. ಈ ನಿರ್ಧಾರಕ್ಕೆ ಗವಿಸಿದ್ದಪ್ಪನ ತಾಯಿ ಆಕ್ಷೇಪಿಸಿದ್ದು, ರಾಜಿ ಪಂಚಾಯಿತಿ ನಂತರವೂ ಈ ಕೇಸ್ ದಾಖಲಿಸಿದ್ದಕ್ಕೆ ಅವರು ಪ್ರಶ್ನಿಸಿದ್ದಾರೆ.
ಕೊಪ್ಪಳ, ಆಗಸ್ಟ್ 18: ಪ್ರೀತಿ ವಿಚಾರವಾಗಿ ನಡೆದ ಗವಿಸಿದ್ದಪ್ಪ ನಾಯಕ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಲೆಯಾದ ಗವಿಸಿದ್ದಪ್ಪ ಸೇರಿದಂತೆ ನಾಲ್ವರ ವಿರುದ್ಧ ಕೊಪ್ಪಳ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ. ಹತ್ಯೆಯಾದ ಗವಿಸಿದ್ದಪ್ಪ, ಗವಿಸಿದ್ದಪ್ಪ ತಂದೆ ನಿಂಗಜ್ಜ ನಾಯಕ, ತಾಯಿ ದೇವಮ್ಮ, ಸಹೋದರಿ ಅನ್ನಪೂರ್ಣ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ತಮ್ಮ ಕುಟುಂಬದ ವಿರುದ್ಧ ಫೋಕ್ಸೋ ಕೇಸ್ ದಾಖಲಾಗಿರುವ ಬಗ್ಗೆ ಗವಿಸಿದ್ದಪ್ಪ ತಾಯಿ ದೇವಮ್ಮ ಮಾತನಾಡಿ, ರಾಜಿ ಪಂಚಾಯಿತಿ ಬಳಿಕವೂ ಕೇಸ್ ದಾಖಲಿಸಿದ್ದು ಏಕೆ? ನನ್ನ ಮತ್ತು ನನ್ನ ಮಗನ ಮೇಲೆ ಕೇಸ್ ಹಾಕಲಿ, ನನ್ನ ಪತಿ ಮತ್ತು ಮಗಳ ಮೇಲೆ ಕೇಸ್ ದಾಖಲಿಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.
Latest Videos
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
