ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ನೀವು ಶಾಕ್​​ ಆಗೋದು ಗ್ಯಾರಂಟಿ

Edited By:

Updated on: Feb 12, 2026 | 6:46 PM

ಕೊಪ್ಪಳದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ನಡೆದ ಹಣ್ಣು, ಜೇನು ಹಾಗೂ ಅಣಬೆ ಮೇಳದಲ್ಲಿ ಹಿಮಾಲಯದ ಯಾರ್ಸಗುಂಬಾ ಅಣಬೆ ಪ್ರಮುಖ ಆಕರ್ಷಣೆಯಾಗಿತ್ತು. ಪ್ರತಿ ಕೆ.ಜಿ.ಗೆ 15 ಲಕ್ಷ ಬೆಲೆ ಬಾಳುವ ಈ ದುಬಾರಿ ಅಣಬೆ ಕ್ಯಾನ್ಸರ್, ಮಧುಮೇಹ ಸೇರಿದಂತೆ ಹಲವು ಕಾಯಿಲೆಗಳಿಗೆ ಔಷಧೀಯ ಗುಣಗಳನ್ನು ಹೊಂದಿದೆ ಎನ್ನಲಾಗಿದೆ. ಇದನ್ನು ನೇಪಾಳದಿಂದ ತಂದು ಪ್ರದರ್ಶಿಸಲಾಗಿದೆ.

ಕೊಪ್ಪಳ, ಫೆಬ್ರವರಿ 12: ಮಹಾ ಶಿವರಾತ್ರಿ ಅಂಗವಾಗಿ ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ಐದು ದಿನಗಳ ಹಣ್ಣು, ಜೇನು ಮತ್ತು ಅಣಬೆ ಮೇಳದಲ್ಲಿ ಜಗತ್ತಿನ ಅತ್ಯಂತ ದುಬಾರಿ ಅಣಬೆಯಾದ ಯಾರ್ಸಗುಂಬಾವನ್ನು (ಕಾರ್ಡಿಯೋಶೆಪ್ಸ್) ಪ್ರದರ್ಶನಕ್ಕೆ ಇಡಲಾಗಿದೆ. ಹಿಮಾಲಯದ ತಪ್ಪಲಿನಲ್ಲಿ ಬೆಳೆಯುವ ಈ ಅಣಬೆ ಪ್ರತಿ ಕೆ.ಜಿ.ಗೆ 15 ಲಕ್ಷ ರೂಪಾಯಿ ಬೆಲೆ ಬಾಳುತ್ತದೆ. ಈ ಅಣಬೆಯು ಹೆಚ್ಚಿನ ಔಷಧೀಯ ಗುಣಗಳನ್ನು ಹೊಂದಿದ್ದು, ಮಧುಮೇಹ, ಕ್ಯಾನ್ಸರ್, ಬಿಪಿ, ಅಸ್ತಮಾ ಸೇರಿದಂತೆ ಹಲವು ಕಾಯಿಲೆಗಳಿಗೆ ಮದ್ದಾಗಿ ಬಳಕೆಯಾಗುತ್ತದೆ ಎಂದು ಹೇಳಲಾಗುತ್ತದೆ. ಕೊಪ್ಪಳ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣ ಉಕ್ಕುಂದ ಅವರು, ಈ ಅಣಬೆಯನ್ನು ನೇಪಾಳದಿಂದ ತರಿಸಲಾಗಿದೆ ಎಂದು ತಿಳಿಸಿದ್ದಾರೆ. ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ 10 ಗ್ರಾಂ ಅಣಬೆಯನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದ್ದು, ಸಾರ್ವಜನಿಕರಿಗೆ ಇದರ ಬಗ್ಗೆ ಅರಿವು ಮೂಡಿಸುವುದು ಮತ್ತು ವೀಕ್ಷಣೆಗೆ ಅವಕಾಶ ಕಲ್ಪಿಸುವುದು ನಮ್ಮ ಉದ್ದೇಶ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Feb 12, 2026 06:41 PM