Loading video

ಕೊಪ್ಪಳ ಘಡಿವಡಕಿಯಲ್ಲಿ ಹೀಗೊಂದು ಹರಕೆ: ರಥದ ಮೇಲಿಂದ ಮಕ್ಕಳನ್ನು ಎಸೆಯುತ್ತಾರೆ ನೋಡಿ!

| Updated By: Ganapathi Sharma

Updated on: Feb 25, 2025 | 9:46 AM

ಕೊಪ್ಪಳ ಘಡಿವಡಕಿಯ ಶ್ರೀ ಮಹಾಲಕ್ಷ್ಮೀ ದೇಗುಲದ ರಥೋತ್ಸವದಲ್ಲಿ ವಿಭಿನ್ನ ಆಚರಣೆ, ಹರಕೆ ಸಲ್ಲಿಸಲಾಗಿದೆ. ಅರ್ಚಕರು ಪುಟ್ಟ ಪುಟ್ಟ ಮಕ್ಕಳನ್ನು ರಥದಿಂದ ಕೆಳಗಡೆಗೆ ಪೋಷಕರ ಕೈಗೆ ಎಸೆಯುವ ದೃಶ್ಯ ನೆರೆದಿದ್ದ ಭಕ್ತರ ಮನಸೆಳೆಯಿತು. ಅಂದಹಾಗೆ, ಇದೇನು ಆಚರಣೆ, ಯಾಕಾಗಿ ಈ ರೀತಿ ಮಾಡುತ್ತಾರೆ? ವಿವರ ಇಲ್ಲಿದೆ.

ಕೊಪ್ಪಳ, ಫೆಬ್ರವರಿ 25: ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕನ ಘಡಿವಡಕಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಮಹೋತ್ಸವದಲ್ಲಿ ವಿಭಿನ್ನ ಆಚರಣೆ ನಡೆಯುತ್ತದೆ. ಹರಕೆ ಹೊತ್ತ ಪೋಷಕರು ರಥದ ಮೇಲಿಂದ ಮಕ್ಕಳನ್ನು ಪೋಷಕರ ಕೈಗೆ ಎಸೆದು ಹರಕೆ ತೀರಿಸಿಕೊಳ್ಳುತ್ತಾರೆ. ಇಲ್ಲಿ ಮಹಿಳೆಯರಿಂದಲೇ ಎಳೆಯಲ್ಪಡುತ್ತದೆ. ಇಲ್ಲಿ ಹರಕೆ ಹೊತ್ತರೆ ಮಕ್ಕಳಾಗುತ್ತವೆ ಎನ್ನುವ ನಂಬಿಕೆ ಇದ್ದು, ಮಕ್ಕಳಾದ ಬಳಿಕ ತಾಯಂದಿರು ಹರಕೆ ತೀರಿಸುತ್ತಾರೆ. ರಥೋತ್ಸವದಲ್ಲಿ ಮಗುವಿಗೆ ಮಹಾಲಕ್ಷ್ಮಿ ದೇವಿ ದರ್ಶನವಾಗುತ್ತದೆ. ದರ್ಶನ ಬಳಿಕ ರಥದ ಸ್ವಲ್ಪ ಮೇಲಿಂದ ಪೋಷಕರ ಕೈಗೆ ಮಕ್ಕಳನ್ನು ಅರ್ಚಕರು ಎಸೆಯುತ್ತಾರೆ. ಪಾಲಕರು ಬೆಡ್​ಶೀಟ್ ಹಿಡಿದು ಮಕ್ಕಳನ್ನು ಹಿಡಿದುಕೊಳ್ಳುತ್ತಾರೆ. ವಿಡಿಯೋ ಇಲ್ಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ