ಸಿದ್ದರಾಮಯ್ಯ ಬಳಿಕ ರಾಜ್ಯದ ಮುಸ್ಲಿಮರಿಗೆ ಚೊಂಬು: ಅನ್ಸಾರಿ
ಕರ್ನಾಟಕದಲ್ಲಿ ಸದ್ಯ ವಕ್ಫ್ ಆಸ್ತಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಬಗ್ಗೆ ರೈತರು ಸಚಿವ ಜಮೀರ್ ಅಹಮ್ಮದ್ ಖಾನ್ ವಿರುದ್ಧ ಮುಗಿಬಿದ್ದಿದ್ದಾರೆ. ಇದರ ಮಧ್ಯ ಮತ್ತೋರ್ವ ಮುಸ್ಲಿಂ ಸಮುದಾಯ ಕಾಂಗ್ರೆಸ್ ನಾಯಕರೊಬ್ಬರು, ಸಿದ್ದರಾಮಯ್ಯ ಬಳಿಕ ರಾಜ್ಯದ ಮುಸ್ಲಿಮರಿಗೆ ಚೊಂಬು ಕೊಡುತ್ತಾರೆ ಎನ್ನುವ ಮಾತುಗಳನ್ನಾಡಿದ್ದಾರೆ.
ಕೊಪ್ಪಳ, (ನವೆಂಬರ್ 10): ಸಿದ್ದರಾಮಯ್ಯ ಸಿಎಂ ಇರೋವರಗೆ ನಮ್ಮ ಮುಸ್ಲಿಂ ಸಮಾಜದವರು ಏನಾದ್ರು ಮಾಡಿಕೊಳ್ಳಬೇಕು. ಅವರ ನಂತರ ನಮಗೆ ಚಂಬೇ ಗತಿಯಾಗುತ್ತೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ. ಕೊಪ್ಪಳ ನಗರದಲ್ಲಿ ನಿನ್ನೆ (ನವೆಂಬರ್ 09) ಸಂಜೆ ನಡೆದ ಸ್ವತಂತ್ರ ಹೋರಾಟಗಾರರ ಜಯಂತಿ ಕಾರ್ಯಕ್ರಮದಲ್ಲಿ ಇಕ್ಬಾಲ್ ಅನ್ಸಾರಿ ಇಂತಹದೊಂದು ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ ಬಳಿ ಸಮಾಜದವರು ಆರು ತಿಂಗಳಿಗೊಮ್ಮೆ ಹೋಗಬೇಕು, ನೂರು ಕೋಟಿ ರೂ. ಅನುದಾನ ತಂದು, ಸಮಾಜದ ಕೆಲಸ ಮಾಡಬೇಕು. ನಾವು ನೀವು, ನಮ್ಮ ಸಮಾಜದವರು ಏನಾದ್ರು ಮಾಡಿಕೊಳ್ಳಬೇಕು. ನಂತರ ಚಂಬೇ ಗತಿಯಾಗುತ್ತದೆ ಎಂದು ಹೇಳಿದ್ದಾರೆ. ಇನ್ನು ನಾನು ಸಿದ್ದರಾಮಯ್ಯರನ್ನು ಮಾತ್ರ ನನ್ನ ನಾಯಕ ಎಂದು ಒಪ್ಪಿಕೊಂಡಿದ್ದೇನೆ. ರಾಹುಲ್ ಗಾಂಧಿ, ಸೋನಿಯಾಗಾಂಧಿರನ್ನು ಕೂಡಾ ನಾನು ನಮ್ಮ ನಾಯಕ ಅಂತ ಒಪ್ಪಿಕೊಂಡಿಲ್ಲ ಎಂದು ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.
Published on: Nov 10, 2024 03:12 PM