ಕೊಪ್ಪಳ: ಎಂಬಿಬಿಎಸ್ ಸೀಟ್ಗಾಗಿ ನಕಲಿ ಅಂಗವಿಕಲ ಪ್ರಮಾಣ ಪತ್ರ; ಅಧಿಕಾರಿ ಬಂಧನ
ಹಣದಾಸೆಗೆ ನಕಲಿ ಪ್ರಮಾಣ ಪತ್ರ ನೀಡಿದ ನೌಕರ ಇದೀಗ ಪೊಲೀಸರ ಅತಿಥಿ ಆಗಿರುವಂತಹ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕಳೆದ ಕೆಲ ವರ್ಷಗಳಿಂದ ನಕಲಿ ಪ್ರಮಾಣ ಪತ್ರ ನೀಡುವ ದಂಧೆಯನ್ನ ಮಾಡ್ತಿದ್ದ ಆತ ಪೊಲೀಸರ ಬಲೆಗೆ ಬಿದ್ದಿದ್ದು, ಇದೀಗ ಆತನ ಬಂಧನದಿಂದ ನಕಲಿ ಪ್ರಮಾಣ ಪತ್ರಕ್ಕೆ ಸಹಿ ಮಾಡಿದ ವೈದ್ಯರಿಗೂ ಢವ ಢವ ಶುರುವಾಗಿದೆ.
ಕೊಪ್ಪಳ, ಸೆಪ್ಟೆಂಬರ್ 18: ಜಿಲ್ಲೆಯಲ್ಲಿ ಬಹುದೊಡ್ಡ ಕರ್ಮಕಾಂಡ ಒಂದು ಬಯಲಾಗಿದೆ. ಎಂಬಿಬಿಎಸ್ ಸೀಟ್ಗಾಗಿ ನಕಲಿ ಅಂಗವಿಕಲ ಪ್ರಮಾಣ ಪತ್ರವನ್ನು ಸೃಷ್ಟಿಸಿರುವಂತಹ ಘಟನೆ ನಡೆದಿದೆ. ಸದ್ಯ ಜಿಲ್ಲೆಯ ಕುಕನೂರ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದ ನೇತ್ರ ತಪಸಾಣಾ ಅಧಿಕಾರಿಯನ್ನ ಪೊಲೀಸರು ಬಂಧಿಸಿದ್ದಾರೆ. ಸುಧಾಕರ್ ಬಂಧಿತ ಅಧಿಕಾರಿ. ಸುಮಾರು 21 ವಿದ್ಯಾರ್ಥಿಗಳಿಗೆ ಸುಧಾಕರ್ ನಕಲಿ ಅಂಗವಿಕಲ ಪ್ರಮಾಣ ಪತ್ರ ನೀಡಿರುವ ಆರೋಪ ಕೇಳಿಬಂದಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
