ಗೃಹಲಕ್ಷ್ಮೀ ಹಣದಲ್ಲಿ ರೊಟ್ಟಿ ಕೇಂದ್ರ ತೆರೆದ ನಾರಿಯರು!

Updated on: May 19, 2026 | 9:53 AM

ಜಿಲ್ಲೆಯ ಕುಷ್ಟಗಿಯ ತೆಗ್ಗಿಣ ಓಣಿಯ ಮೂವರು ಮಹಿಳೆಯರು ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಳಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ. ಒಂದೇ ಕುಟುಂಬದ ಈ ಮೂವರು ಮಹಿಳೆಯರು, ಗೃಹಲಕ್ಷ್ಮಿ ಯೋಜನೆಯಡಿ ಬಂದ ಹಣವನ್ನು ಸಂಗ್ರಹಿಸಿ, ಅದನ್ನು ತಮ್ಮ ರೊಟ್ಟಿ ಕೇಂದ್ರದ ಸ್ಥಾಪನೆಗೆ ಹೂಡಿಕೆ ಮಾಡಿದ್ದಾರೆ. ಮೋಹಿನಿ ಮತ್ತು ಇನ್ನಿಬ್ಬರು ಸಹೋದರಿಯರು ಸೇರಿ ಗೃಹಲಕ್ಷ್ಮಿ ರೊಟ್ಟಿ ಕೇಂದ್ರವನ್ನು ಆರಂಭಿಸಿದ್ದು, ಇದು ಮಹಿಳೆಯರಿಗೆ ಜೀವನಪೂರ್ತಿ ದುಡಿದು ತಿನ್ನಲು ಒಂದು ದಾರಿಯಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ರೊಟ್ಟಿ ಮಿಷನ್, ಹಿಟ್ಟು ಮಿಕ್ಸ್ ಮಾಡುವ ಗ್ರೈಂಡರ್ ಮತ್ತು ಹಿಟ್ಟಿನ ಗಿರಣಿ ಸೇರಿ ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಕೊಪ್ಪಳ, ಮೇ 19: ಜಿಲ್ಲೆಯ ಕುಷ್ಟಗಿಯ ತೆಗ್ಗಿಣ ಓಣಿಯ ಮೂವರು ಮಹಿಳೆಯರು ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಳಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ. ಒಂದೇ ಕುಟುಂಬದ ಈ ಮೂವರು ಮಹಿಳೆಯರು, ಗೃಹಲಕ್ಷ್ಮಿ ಯೋಜನೆಯಡಿ ಬಂದ ಹಣವನ್ನು ಸಂಗ್ರಹಿಸಿ, ಅದನ್ನು ತಮ್ಮ ರೊಟ್ಟಿ ಕೇಂದ್ರದ ಸ್ಥಾಪನೆಗೆ ಹೂಡಿಕೆ ಮಾಡಿದ್ದಾರೆ. ಮೋಹಿನಿ ಮತ್ತು ಇನ್ನಿಬ್ಬರು ಸಹೋದರಿಯರು ಸೇರಿ ಗೃಹಲಕ್ಷ್ಮಿ ರೊಟ್ಟಿ ಕೇಂದ್ರವನ್ನು ಆರಂಭಿಸಿದ್ದು, ಇದು ಮಹಿಳೆಯರಿಗೆ ಜೀವನಪೂರ್ತಿ ದುಡಿದು ತಿನ್ನಲು ಒಂದು ದಾರಿಯಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ರೊಟ್ಟಿ ಮಿಷನ್, ಹಿಟ್ಟು ಮಿಕ್ಸ್ ಮಾಡುವ ಗ್ರೈಂಡರ್ ಮತ್ತು ಹಿಟ್ಟಿನ ಗಿರಣಿ ಸೇರಿ ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us