ಕೋಟೆಕಾರು ಬ್ಯಾಂಕ್ ದರೋಡೆಕೋರನ ಕಾಲಿಗೆ ಪೊಲೀಸ್ ಗುಂಡು, ಕ್ರೈಮ್ ಸ್ಪಾಟ್ನಿಂದ ಟಿವಿ9 ವರದಿ
ಕ್ರೈಮ್ ನಡೆದ ಜಾಗದಲ್ಲಿ ಪೊಲೀಸ್ ಅಧಿಕಾರಿಗಳು, ಸಿಸಿಬಿ ಪೊಲೀಸರು ನೆರೆದಿದ್ದಾರೆ. ಎಫ್ಎಸ್ಎಲ್ ತಂಡ ಕೂಡ ಅಲ್ಲಿಗೆ ಅಗಮಿಸಿದೆ. ಮಣಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗುವ ಪ್ರಯತ್ನ ಮಾಡಿದ್ದರಿಂದ ಅನಿವಾರ್ಯವಾಗಿ ಗುಂಡು ಹಾರಿಸಬೇಕಾಯಿತು ಎಂದು ಪೊಲೀಸರು ಹೇಳುತ್ತಿದ್ದಾರೆ. ಸ್ಪಾಟ್ ಮಹಜರ್ಗಾಗಿ ಕೇವಲ ಮಣಿಯನ್ನು ಮಾತ್ರ ಕರೆತರಲಾಗಿತ್ತು ಎಂದು ವರದಿಗಾರ ಹೇಳುತ್ತಾರೆ.
ಮಂಗಳೂರು: ಕೋಟೆಕಾರು ಬ್ಯಾಂಕ್ ದರೋಡೆಗೆ ಸಂಬಂಧಿಸಿದಂತೆ ಇಂದು ಮತ್ತೊಂದು ಬೆಳವಣಿಗೆ ನಡೆದಿದೆ. ನಾವು ಈಗಾಗಲೇ ವರದಿ ಮಾಡಿರುವ ಹಾಗೆ ಪ್ರಕರದಲ್ಲಿ ಪೊಲೀಸರು ಮೂವರು ಜನರನ್ನು ಬಂಧಸಿದ್ದು, ಸಿಸಿಬಿ ಮತ್ತು ಉಳ್ಳಾಲ ಠಾಣೆಯ ಪೊಲೀಸರು ಬಂಧಿತರಲ್ಲಿ ಒಬ್ಬನಾಗಿರುವ ಕಣ್ಣನ್ ಮಣಿ ಎಂಬುವನನ್ನು ಬ್ಯಾಂಕ್ನಿಂದ ಒಂದಿ ಕಿಮೀ ದೂರವಿರುವ ಅಲಂಕಾರ್ ಗುಡ್ಡೆಗೆ ಸ್ಪಾಟ್ ಮಹಜರ್ಗೆ ಅಂತ ಕರೆತಂದಾಗ ಅವನು ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ. ಅಗಲೇ ಶರೀಫ್ ಹೆಸರಿನ ಇನ್ಸ್ಪೆಕ್ಟರ್ ಒಬ್ಬರು ಅವನ ಕಾಲಿಗೆ ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ. ಅವನನ್ನು ನಗರದ ಎನಪೊಯಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಮ್ಮ ಮಂಗಳೂರು ವರದಿಗಾರ ಘಟನಾ ಸ್ಥಳದಿಂದ ವರದಿ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಂಗಳೂರಿನ ಕೋಟೆಕಾರು ಬ್ಯಾಂಕ್ ದರೋಡೆ: ಮೂವರು ಆರೋಪಿಗಳ ಬಂಧನ
Latest Videos