India-Pakistan War Updates; ಭಾರತೀಯ ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸಲು ತಿರಂಗ ಯಾತ್ರೆ ಆರಂಭಿಸಿರುವ ಕೆಪಿಸಿಸಿ

Updated on: May 09, 2025 | 11:28 AM

ದೇಶದ ವಿಭಜನೆಯಾದ ಮೇಲೆ ನಮ್ಮ ಮೇಲೆ ಯುದ್ಧಕ್ಕೆ ಬಂದಾಗಲೆಲ್ಲ ಪಾಕಿಸ್ತಾನ ಮಣ್ಣುಮುಕ್ಕಿದೆ, ಆದರೂ ಅದು ಪಾಠ ಕಲಿತಿಲ್ಲ, ಭಾರತದ ಸಹನೆಯನ್ನು ಪಾಕಿಸ್ತಾನ ಪದೇಪದೆ ಪರೀಕ್ಷಿಸುತಿತ್ತು, ಸಹನೆಯ ಕಟ್ಟೆಯೊಡೆದಾಗ ಭಾರತ ಆಕ್ರಮಣ ಶುರುಮಾಡಿದೆ, ಕೇಂದ್ರ ಸರ್ಕಾರಕ್ಕೂ ನಾವು ಅಭಿನಂದನೆ ಸಲ್ಲಿಸುತ್ತೇವೆ ಮತ್ತು ಅದು ತೆಗೆದುಕೊಳ್ಳುವ ನಿರ್ಣಯಗಳಿಗೆ ಬೆಂಬಲವಾಗಿ ನಿಂತಿದ್ದೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಬೆಂಗಳೂರು, ಮೇ 9: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು (KPCC) ಪಾಕಿಸ್ತಾನದ ಜೊತೆ ಯುದ್ಧ ಮಾಡುತ್ತಿರುವ ಭಾರತೀಯ ಸೇನೆಯತ್ಮಸ್ಥೈರ್ಯ ಹೆಚ್ಚಿಸಲು, ಬಲ ತುಂಬಿಸಲು ಮತ್ತು ಅದರೊಂದಿಗೆ ಸಮಗ್ರತೆಯನ್ನು ಪ್ರದರ್ಶಿಸಲು ತಿರಂಗ ಯಾತ್ರೆಯನ್ನು ಮಾಡುತ್ತಿದೆ. ಮಾಧ್ಯಮಗಳೊಂದಿಗೆ ಮಾತಾಡಿದ ಸಚಿವ ದಿನೇಶ್ ಗುಂಡೂರಾವ್, ಪೂರ್ಣ ಪ್ರಮಾಣದ ಯುದ್ಧ ಶುರುವಾಗಿಲ್ಲ, ಯುದ್ಧ ಬೇಡ ಅಂತ ನಾವು ಬಯಸುತ್ತೇವೆ, ಆದರೆ ಪಾಕಿಸ್ತಾನದ ಸೇನೆ ನಮ್ಮೊಂದಿಗೆ ಕಾಲು ಕೆದರಿಕೊಂಡು ಜಗಳಕ್ಕೆ ಬರೋದು, ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರನ್ನು ಬಿಟ್ಟು ಅಮಾಯಕರನ್ನು ಕೊಲ್ಲಿಸುವುದು ಮಾಡುತ್ತಿದೆ, ಪಾಕಿಸ್ತಾನದ ಎಲ್ಲ ದುಷ್ಟ ಯೋಚನೆಗಳಿಗೆ ಸರಿಯಾದ ಉತ್ತರ ನೀಡುತ್ತಿರುವ ನಮ್ಮ ಸೇನೆಯನ್ನು ಅಭಿನಂದಿಸುತ್ತ, ಅವರೊಂದಿಗೆ ನಾವಿದ್ದೇವೆ ಎಂಬ ಅಂಶವನ್ನು ತೋರಿಸಲು ತಿರಂಗ ಯಾತ್ರೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ:   ಭಾರತೀಯ ಸೇನೆಯಿಂದ ಲಾಹೋರ್​ ವಾಯುನೆಲೆಯ ರಾಡಾರ್ ವ್ಯವಸ್ಥೆ ಉಡೀಸ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ