‘ಕೃಷ್ಣಂ ಪ್ರಣಯ ಸಖಿ’ ಕಲೆಕ್ಷನ್ ಎಷ್ಟು? ಗಳಿಕೆ ಬಗ್ಗೆ ಗಣೇಶ್ ಮಾತು

‘ಕೃಷ್ಣಂ ಪ್ರಣಯ ಸಖಿ’ ಕಲೆಕ್ಷನ್ ಎಷ್ಟು? ಗಳಿಕೆ ಬಗ್ಗೆ ಗಣೇಶ್ ಮಾತು

ರಾಜೇಶ್ ದುಗ್ಗುಮನೆ
|

Updated on: Aug 18, 2024 | 12:54 PM

‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರ ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಮೂಡಿತ್ತು. ಕೊನೆಗೂ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಸಿನಿಮಾದ ಪಕ್ಕಾ ಲೆಕ್ಕ ಬಗ್ಗೆ ಗಣೇಶ್ ಅವರು ಮಾತನಾಡಿದ್ದಾರೆ.

‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಸಕ್ಸಸ್ ಮೀಟ್ ನಡೆದಿದೆ. ಸಿನಿಮಾ ಗೆಲುವು ಕಂಡ ವಿಚಾರ ಅವರಿಗೆ ಖುಷಿ ತಂದಿದೆ. ‘ಕೃಷ್ಣಂ ಪ್ರಣಯ ಸಖಿ’ ಎಷ್ಟು ಕೋಟಿ ಗಳಿಕೆ ಮಾಡಿತು ಎನ್ನುವ ಕುತೂಹಲ ಅನೇಕರಿಗೆ ಇದೆ. ಈ ಬಗ್ಗೆ ಗಣೇಶ್ ಅವರು ಸಕ್ಸಸ್​ ಮೀಟ್​ನಲ್ಲಿ ಮಾತನಾಡಿದ್ದಾರೆ. ‘ಎರಡು ವಾರ ಬಿಟ್ಟು ದೊಡ್ಡದಾಗಿ ಸಕ್ಸಸ್ ಮೀಟ್ ಮಾಡಬೇಕು ಎಂದುಕೊಂಡಿದ್ದೇವೆ. ಆದಿನ ನಂಬರ್ಸ್ ಹೇಳುತ್ತೇವೆ. ಹಿಡನ್ ನಂಬರ್ ಇಲ್ಲ. ತಪ್ಪು ನಂಬರ್ ಹೇಳುತ್ತಾ ನಮಗೆ ನಾವು ಮೋಸ ಮಾಡಿಕೊಳ್ಳುತ್ತಾ ಹೋಗುತ್ತೇವೆ. ಆ ರೀತಿ ಆಗಬಾರದು’ ಎಂದು ಗಣೇಶ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.