Tv9 Digital Live: ನಾಯಕರ ಮಾತು ಪಕ್ಷಕ್ಕೆ ಹಾನಿ; ಟಿವಿ9 ಕನ್ನಡ ಡಿಜಿಟಲ್ ಚರ್ಚೆ ವೀಕ್ಷಿಸಿ
ತೆನೆ ಹೊತ್ತ ಮಹಿಳೆಯ ಚಿಹ್ನೆಯನ್ನೇ ಇಟ್ಟುಕೊಂಡಿರುವ ಜೆಡಿಎಸ್ ಪಕ್ಷದ ವರಿಷ್ಠರು ಮಹಿಳಾ ಜನಪ್ರತಿನಿಧಿಯೋರ್ವರ ವಿರುದ್ಧ ಬಳಸಿರುವ ಪದಗಳು ಜೆಡಿಎಸ್ಗೆ ತೀವ್ರವಾದ ಪೆಟ್ಟು ನೀಡಲಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
ಕೆಆರ್ಎಸ್ ಸೋರುತ್ತಿದ್ದರೆ ನೀರು ಸೋರದಂತೆ ಸುಮಲತಾ ಅವರನ್ನ ಮಲಗಿಸಬೇಕು ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಂಸದೆ ಸುಮಲತಾ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಜತೆಗೆ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿಯೂ ಅವರು ತಿಳಿಸಿದ್ದರು. ಅವರ ಮಾತಿಗೆ ತೀವ್ರ ಟೀಕೆ ಎದುರಾಗಿತ್ತು. ಆನಂತರ ಪ್ರತಿಕ್ರಿಯೆ ನೀಡಿದ್ದ ಸಂಸದೆ ಸುಮಲತಾ ಅಂಬರೀಶ್, ಕುಮಾರಸ್ವಾಮಿ ಇಂದೇ ಆಡಿಯೋ, ವಿಡಿಯೋ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದರು. ಆಡಿಯೋ ಬಾಂಬ್, ವಿಡಿಯೋ ಬಾಂಬ್ ಏನಾದ್ರು ಮಾಡಿ. ಜನ ನ್ಯೂಕ್ಲಿಯರ್ ಬಾಂಬ್ ಇಟ್ಟುಕೊಂಡು ಕಾಯ್ತಿದ್ದಾರೆ. ನಿಮ್ಮನ್ನ ಮುಗಿಸಲು ಜನರು ಕಾಯುತ್ತಿದ್ದಾರೆ ಎಂದು ಸುಮಲತಾ ಹೇಳಿದ್ದರು. ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಜೆಡಿಎಸ್ ಪಕ್ಷಕ್ಕೂ ಹೊಡೆತ ನೀಡಲಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು. ತೆನೆ ಹೊತ್ತ ಮಹಿಳೆಯ ಚಿಹ್ನೆಯನ್ನೇ ಇಟ್ಟುಕೊಂಡಿರುವ ಜೆಡಿಎಸ್ ಪಕ್ಷದ ವರಿಷ್ಠರು ಮಹಿಳಾ ಜನಪ್ರತಿನಿಧಿಯೋರ್ವರ ವಿರುದ್ಧ ಬಳಸಿರುವ ಪದಗಳು ಜೆಡಿಎಸ್ಗೆ ತೀವ್ರವಾದ ಪೆಟ್ಟು ನೀಡಲಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಜತೆಗೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಯೊಂದು ಸಹ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಟಿವಿ9 ಕನ್ನಡ ಡಿಜಿಟಲ್ ನಡೆಸಿರುವ ಚರ್ಚೆ ಇಲ್ಲಿದೆ.
ಇದನ್ನೂ ಓದಿ: ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮಹಿಳೆಯರ ಕ್ಷಮೆ ಯಾಚಿಸುವಂತೆ ಮಂಡ್ಯದಲ್ಲಿ ಪ್ರತಿಭಟನೆ
Opinion: ಮಾತು ಮನೆ ಕೆಡಿಸಿತ್ತು; ಸಿದ್ದು, ಕುಮಾರಸ್ವಾಮಿ ರಾಜಕೀಯ ದಡ್ಡತನ ತೋರಿಸಿದ್ದು ನಿಜ
(KRS Dam break issue Mandya MP Sumalatha Ambarish and Former CM HD Kumaraswamy talk Tv9 Digital Live debate)