AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಹೋದರರ ನಡುವೆ ಬಿರುಕು? ಹಾರ್ದಿಕ್ ಔಟಾದಾಗ ಕೃನಾಲ್ ಅತಿರೇಕದ ಸಂಭ್ರಮ

ಸಹೋದರರ ನಡುವೆ ಬಿರುಕು? ಹಾರ್ದಿಕ್ ಔಟಾದಾಗ ಕೃನಾಲ್ ಅತಿರೇಕದ ಸಂಭ್ರಮ

ಝಾಹಿರ್ ಯೂಸುಫ್
|

Updated on: Apr 13, 2026 | 10:36 AM

Share

IPL 2026. RCB vs MI: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 20ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್​ಗಳಲ್ಲಿ 240 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 222 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಆರ್​​​ಸಿಬಿ 18 ರನ್​​ಗಳ ಜಯ ಸಾಧಿಸಿದೆ.

IPL 2026: ಐಪಿಎಲ್ 2026ರ ಬಹುನಿರೀಕ್ಷಿತ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದು ಪಾಂಡ್ಯ ಸಹೋದರರ ಜಿದ್ದಾಜಿದ್ದು. ತಮ್ಮ ಹಾರ್ದಿಕ್ ಪಾಂಡ್ಯ ವಿಕೆಟ್ ಪತನಗೊಂಡಾಗ ಅಣ್ಣ ಕೃನಾಲ್ ಪಾಂಡ್ಯ ಸಂಭ್ರಮಿಸಿದ ರೀತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 20 ಓವರ್​ಗಳಲ್ಲಿ 240 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಪರ ಹಾರ್ದಿಕ್ ಪಾಂಡ್ಯ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಬಿರುಸಿನ ಬ್ಯಾಟಿಂಗ್​ ಪ್ರದರ್ಶಿಸಿದ ಹಾರ್ದಿಕ್ ಪಾಂಡ್ಯ 22 ಎಸೆತಗಳಲ್ಲಿ 40 ರನ್ ಗಳಿಸಿ ಆರ್​ಸಿಬಿ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದರು.

ಆದರೆ, 15ನೇ ಓವರ್‌ನಲ್ಲಿ ಆರ್‌ಸಿಬಿ ವೇಗಿ ಜೇಕಬ್ ಡಫಿ ಎಸೆದ ಎಸೆತದಲ್ಲಿ ಸಿಕ್ಸರ್ ಸಿಡಿಸಲು ಹೋಗಿ ಹಾರ್ದಿಕ್ ಔಟ್ ಆದರು. ಈ ಕ್ಷಣದಲ್ಲಿ ಆರ್‌ಸಿಬಿ ಪರ ಆಡುತ್ತಿದ್ದ ಅಣ್ಣ ಕೃನಾಲ್ ಪಾಂಡ್ಯ ತೋರಿದ ಪ್ರತಿಕ್ರಿಯೆ ಎಲ್ಲರನ್ನೂ ದಂಗಾಗುವಂತೆ ಮಾಡಿತು

ಸಾಮಾನ್ಯವಾಗಿ ಅಣ್ಣ ಅಥವಾ ತಮ್ಮ ಔಟ್ ಆದಾಗ ಆಟಗಾರರು ಮೌನವಾಗಿರುತ್ತಾರೆ ಅಥವಾ ಸಾಧಾರಣವಾಗಿ ಸಂಭ್ರಮಿಸುತ್ತಾರೆ. ಆದರೆ ಇಲ್ಲಿ ಕೃನಾಲ್ ಪಾಂಡ್ಯ ಅವರು ಹಾರ್ದಿಕ್ ಔಟ್ ಆಗುತ್ತಿದ್ದಂತೆ ಬೌಲರ್‌ಗಿಂತಲೂ ಮಿಗಿಲಾಗಿ ಕುಣಿದು ಕುಪ್ಪಳಿಸಿದರು. ಅವರ ಮುಖದಲ್ಲಿದ್ದ ಆವೇಶ ಮತ್ತು ಸಂಭ್ರಮ ಕಂಡು ಸ್ವತಃ ಹಾರ್ದಿಕ್ ಪಾಂಡ್ಯ ಕೂಡ ಪೆವಿಲಿಯನ್‌ಗೆ ಮರಳುವಾಗ ಒಮ್ಮೆ ಅಣ್ಣನತ್ತ ತಿರುಗಿ ನೋಡುವಂತಾಯಿತು.

ಸಹೋದರರ ನಡುವೆ ಬಿರುಕು?

ಈ ಸಂಭ್ರಮದ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳು ಮೂಡಿವೆ. 2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಅಮೋಘ ಪ್ರದರ್ಶನ ನೀಡಿದಾಗಲೂ ಕೃನಾಲ್ ಮೈದಾನಕ್ಕೆ ಬಂದಿರಲಿಲ್ಲ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಅಭಿನಂದಿಸಿರಲಿಲ್ಲ.

ಇದೀಗ ತಮ್ಮ ಔಟಾಗುತ್ತಿದ್ದಂತೆ ಕೃನಾಲ್ ಪಾಂಡ್ಯ ವಿಚಿತ್ರವಾಗಿ ಸಂಭ್ರಮಿಸುವ ಮೂಲಕ ಇಬ್ಬರ ನಡುವೆ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಪುಷ್ಠಿ ನೀಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಹಾರ್ದಿಕ್ ಪಾಂಡ್ಯ ಅವರ ವೈಯಕ್ತಿಕ ಜೀವನದಲ್ಲಿ (ವಿಚ್ಛೇದನ) ನಡೆದ ಬದಲಾವಣೆಗಳು ಎನ್ನಲಾಗುತ್ತಿದೆ.

ಅಂದರೆ ಹಾರ್ದಿಕ್ ಪಾಂಡ್ಯ ಮೊದಲ ಪತ್ನಿಗೆ ವಿಚ್ಛೇದನ ನೀಡಿ, ಹೊಸ ಗರ್ಲ್​ಫ್ರೆಂಡ್ ಜೊತೆ ಇರುವುದೇ ಸಹೋದರರ ನಡುವಣ ಬಿರುಕಿಗೆ ಕಾರಣ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಐಪಿಎಲ್​ ವೇಳೆ ಮುಖಾಮುಖಿಯಾದಾಗ ಸದಾ ನಗುತ್ತಾ ಪೈಪೋಟಿ ನಡೆಸುತ್ತಿದ್ದ ಇಬ್ಬರು ಸಹೋದರರು ಇದೇ ಮೊದಲ ಬಾರಿ ಮುಖ ಸಿಂಡರಿಸಿಕೊಂಡು ಪಂದ್ಯ ಮುಗಿಸಿ ತೆರಳಿದ್ದಾರೆ. ಇದರೊಂದಿಗೆ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರಾಗಿದೆ.

 

Follow Us