ಗುತ್ತಿಗೆದಾರ ಸಂತೋಷ್ ಸಾವಿನ ಕೇಸ್‌ನಲ್ಲಿ ಕೆ.ಎಸ್. ಈಶ್ವರಪ್ಪಗೆ ಕ್ಲೀನ್‌ಚಿಟ್; ಟಿವಿ9 ಮುಂದೆ ಕಣ್ಣೀರು ಹಾಕಿದ ಮೃತ ಸಂತೋಷ್ ಪತ್ನಿ
ಸಂತೋಷ್ ಪಾಟೀಲ್ ಮೃತಪಟ್ಟು ಮೂರು ತಿಂಗಳಾಗಿದೆ ಇಲ್ಲಿ ವರೆಗೂ ನಮಗೆ ನ್ಯಾಯ ಸಿಕ್ಕಿಲ್ಲ. ಫಿರ್ಯಾದಿದಾರರಿಗೆ ರಿಪೋರ್ಟ್ ಸಲ್ಲಿಕೆ ಬಗ್ಗೆ ಪೊಲೀಸರು ಹೇಳಬೇಕಿತ್ತು. ಡೆತ್ ನೋಟ್ ನಲ್ಲಿ ಕ್ಲಿಯರ್ ಆಗಿ ಬರೆದಿದ್ದಾರೆ ಅದನ್ನ ಒಪ್ಪಿಕೊಳ್ಳಬೇಕು.
ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಪತ್ನಿ ಜಯಶ್ರೀ ಟಿವಿ9 ಜೊತೆ ಮಾತನಾಡಿದ್ದು ಅಳಲು ತೋಡಿಕೊಂಡಿದ್ದಾರೆ. ಸಂತೋಷ್ ಪಾಟೀಲ್ ಮೃತಪಟ್ಟು ಮೂರು ತಿಂಗಳಾಗಿದೆ ಇಲ್ಲಿ ವರೆಗೂ ನಮಗೆ ನ್ಯಾಯ ಸಿಕ್ಕಿಲ್ಲ. ಫಿರ್ಯಾದಿದಾರರಿಗೆ ರಿಪೋರ್ಟ್ ಸಲ್ಲಿಕೆ ಬಗ್ಗೆ ಪೊಲೀಸರು ಹೇಳಬೇಕಿತ್ತು. ಡೆತ್ ನೋಟ್ ನಲ್ಲಿ ಕ್ಲಿಯರ್ ಆಗಿ ಬರೆದಿದ್ದಾರೆ ಅದನ್ನ ಒಪ್ಪಿಕೊಳ್ಳಬೇಕು. ಸಾಯುವ ವ್ಯಕ್ತಿ ಸುಳ್ಳು ಹೇಳುವುದಿಲ್ಲ, ಸತ್ಯನೇ ಹೇಳಿದ್ದಾರೆ ಅದನ್ನ ಗಣನೆಗೆ ತೆಗೆದುಕೊಳ್ಳಬೇಕು. ಕೈ ಬರಹದಲ್ಲಿರುವುದನ್ನೇ ಗಣನೆಗೆ ತೆಗೆದುಕೊಳ್ಳುತ್ತಾರೆ ಅಂದ್ರೇ ನಾನು ಡೆತ್ ನೋಟ್ ಬರೆದಿಡುತ್ತೇನೆ. ಈಶ್ವರಪ್ಪ ಅವರ ಕಾರಣದಿಂದಲೇ ನಾವು ಎಲ್ಲರೂ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಅಂತಾ ಡೆತ್ ನೋಟ್ ಬರೆದಿಡುತ್ತೇವೆ ಇದನ್ನ ಪೊಲೀಸರು ಗಣನೆಗೆ ತೆಗೆದುಕೊಳ್ಳುತ್ತಾರಾ? ಎಲ್ಲಾ ಸಾಕ್ಷಿಗಳು ಇವೆ ನಾಶ ಆಗಿವೆ ಅನಿಸುತ್ತೆ, ಅದಕ್ಕಾಗಿ ಸಾಕ್ಷಿ ಇಲ್ಲಾ ಅಂತಿದ್ದಾರೆ. ಅವರ ಫೋನ್ ನಲ್ಲಿ ಎಷ್ಟೊಂದು ಸಾಕ್ಷಿಗಳು ಇದ್ದವು. ಅವರ ಫೋನ್ ನಲ್ಲಿದ್ದ ಸಾಕ್ಷಿಗಳನ್ನ ಡಿಲಿಟ್ ಮಾಡಿರಬಹುದು ಎಂದು ಮೃತ ಪತಿ ಸಂತೋಷ್ ನೆನಪಿಸಿಕೊಂಡು ಜಯಶ್ರೀ ಕಣ್ಣೀರು ಹಾಕಿದ್ದಾರೆ.