Gadag: ಬಸ್ಸಿನ ಡೋರಲ್ಲಿ ಮಕ್ಕಳೊಂದಿಗೆ ಮಹಿಳೆಯರು ನೇತಾಡುತ್ತಿದ್ದರೂ ವಾಹನ ಓಡಿಸಿದ ಚಾಲಕ!

Gadag: ಬಸ್ಸಿನ ಡೋರಲ್ಲಿ ಮಕ್ಕಳೊಂದಿಗೆ ಮಹಿಳೆಯರು ನೇತಾಡುತ್ತಿದ್ದರೂ ವಾಹನ ಓಡಿಸಿದ ಚಾಲಕ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 16, 2023 | 4:04 PM

ಬಸ್ ಚಾಲಕ ಮತ್ತು ನಿರ್ವಾಹಕನಿಗೂ ಬುದ್ಧಿ ಕಮ್ಮಿ ಅನ್ಸುತ್ತೆ. ಹಿಂಭಾಗದ ಡೋರ್ ಮುಚ್ಚಿಕೊಳ್ಳದ ಹೊರತು ಬಸ್ ಚಲಿಸಬಾರದು.

ಗದಗ: ಬಸ್ ಪ್ರಯಾಣಕ್ಕೆ ಇದೆಂಥ ಆತುರ ಸ್ವಾಮಿ? ಜಿಲ್ಲೆಯ ರೋಣ ತಾಲ್ಲೂಕಿನ ಬೆಳವಣಿಕೆ ಗ್ರಾಮದಲ್ಲಿ ಕಂಡು ಬಂದ ದೃಶ್ಯವಿದು. ಮಹಿಳೆಯರು ತಮ್ಮ ಹಾಗೂ ಮಕ್ಕಳ ಜೀವವನ್ನು ಅಪಾಯಕ್ಕೊಡ್ಡಿ ಪ್ರಯಾಣಿಸ ಬಯಸುತ್ತಿದ್ದಾರೆ. ಎಲ್ಲವನ್ನು ನಾವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (free bus travel) ಸೌಲಭ್ಯದ ಪರಿಣಾಮ ಅಂತ ಹೇಳಲಾಗದು. ಬಸ್ ಒಳಗಡೆ ಮುಂಭಾಗ ಖಾಲಿಯಿದೆ. ಜನರ ಸ್ವಭಾವ (tendency) ನಿಮಗೆ ಗೊತ್ತಲ್ಲ? ಬಸ್ ಹತ್ತಿದ ತಕ್ಷಣ ಸೀಟುಗಳೆಲ್ಲ ಭರ್ತಿಯಾಗಿದ್ದರೆ (occupied) ಹತ್ತಿದ ಸ್ಥಳದಲ್ಲೇ ನಿಂತುಬಿಡುತ್ತಾರೆ. ಬೇರೆಯವರು ಕೂಡ ಹತ್ತಬೇಕು ಅನ್ನೋ ಪ್ರಜ್ಞೆ ಅವರಲ್ಲಿರೋದಿಲ್ಲ. ಅದರ ಪರಿಣಾಮವೇ ನಾವಿಲ್ಲಿ ಕಾಣುತ್ತಿರುವ ದೃಶ್ಯ. ಬಸ್ ಚಾಲಕ ಮತ್ತು ನಿರ್ವಾಹಕನಿಗೂ ಬುದ್ಧಿ ಕಮ್ಮಿ ಅನ್ಸುತ್ತೆ. ಹಿಂಭಾಗದ ಡೋರ್ ಮುಚ್ಚಿಕೊಳ್ಳದ ಹೊರತು ಬಸ್ ಚಲಿಸಬಾರದು. ಡೋರಲ್ಲಿ ಮಹಿಳೆಯರು ಮಕ್ಕಳೊಂದಿಗೆ ನೇತಾಡತ್ತಿದ್ದರೂ ಬಸ್ ಚಲಿಸಲಾರಂಭಿಸುತ್ತದೆ. ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಹೊಣೆ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ