ತನ್ನ ರೀಲ್ಸ್ ಇಷ್ಟಪಡುತ್ತಿದ್ದ ಯುಕನನ್ನು ಮದುವೆಯಾದ ಯುವತಿ ಈಗ ಅವನಿಗಾಗಿ ಹುಡುಕಾಟ ನಡೆಸಿದ್ದಾಳೆ!

ಅರುಣ್​ ಕುಮಾರ್​ ಬೆಳ್ಳಿ

Updated on: Jun 11, 2025 | 1:12 PM

ರಕ್ಷಿತಾ ಮತ್ತು ಪ್ರತಾಪ್ ತಿರುಪತಿಯಲ್ಲಿ ಹಾರ ಬದಲಾಯಿಸಿಕೊಂಡು ಸತಿಪತಿಗಳಾಗಿದ್ದಾರೆ ಮತ್ತು ಪ್ರತಾಪ್ ಎರಡು ಸಲ ಆಕೆಯ ಅಬಾರ್ಷನ್​ ಕೂಡ ಮಾಡಿಸಿದ್ದಾನೆ. ಪ್ರತಾಪ್​ಗೆ ಹುಡುಗಿಯರ ಹುಚ್ಚು ಜಾಸ್ತಿ ಮತ್ತು ಮದುವೆಯಾಗಿರುವ ಮಹಿಳೆಯರ ಮೇಲೆ ಹೆಚ್ಚು ವ್ಯಾಮೋಹ ಅಂತ ರಕ್ಷಿತಾ ಹೇಳುತ್ತಾರೆ. ಅಷ್ಟೆಲ್ಲ ಗೊತ್ತಿದಾಗ್ಯೂ ಈ ಮಹಾರಾಯ್ತಿ ಅವನನ್ನು ಯಾಕೆ ಮದುವೆಯಾದರೂ ಅನ್ನೋದೇ ಅರ್ಥಾವಾಗದ ವಿಷಯ.

ರಾಮನಗರ, ಜೂನ್11: ಯುವತಿ ಹೇಳುತ್ತಿರೋದೆಲ್ಲ ನಿಜವಾದರೆ ಕೆಎಸ್​ಆರ್​​ಟಿಸಿಯಲ್ಲಿ (KSRTC) ಡ್ರೈವರೋ ಅಥವಾ ಕಂಡಕ್ಟರೋ ಆಗಿ ಕೆಲಸ ಮಾಡುವ ಭಂಡ ಪ್ರತಾಪ್​ನಿಂದ ಈಕೆಗೆ ಭಾರೀ ಮೋಸವಾಗಿದೆ, ಅನ್ಯಾಯವಾಗಿದೆ. ರೀಲ್ಸ್ ಮಾಡಿಕೊಂಡಿದ್ದ ರಕ್ಷಿತಾಗೆ ಅದರ ಮೂಲಕವೇ ಪ್ರತಾಪನ ಪರಿಚಯವಾಗಿದೆ. ಪರಿಚಯ ಸ್ನೇಹಕ್ಕೆ ತಿರುಗಿ, ನಂತರ ಅದು ಪ್ರಣಯದಲ್ಲಿ ಮಾರ್ಪಟ್ಟು ಇಬ್ಬರು ಮದುವೆ ಕೂಡ ಆಗಿದ್ದಾರೆ. ಸಮಸ್ಯೆಯೇನೆಂದರೆ ಯುವತಿ ಎಸ್​ಸಿ ಸಮುದಾಯಕ್ಕೆ ಸೇರಿದವರು ಮತ್ತು ಪ್ರತಾಪ್ ಒಕ್ಕಲಿಗ ಗೌಡ. ಪ್ರತಾಪ್ ಅಮ್ಮನಿಗೆ ರಕ್ಷಿತಾ ಬೇಕಿಲ್ಲ, ತಮ್ಮ ಸಮುದಾಯದ ಯುವತಿಯನ್ನು ಮದುವೆಯಾಗು, ಮನೆ ತುಂಬಿಸಿಕೊಳ್ತೀನಿ ಅಂತಾರಂತೆ. ಪ್ರತಾಪ್ ಒಂದು ವರ್ಷ ಕಾಲ ರಕ್ಷಿತಾಳೊಂದಿಗೆ ಸಂಸಾರ ಮಾಡಿ ಈಗ ನಾಪತ್ತೆಯಾಗಿದ್ದಾನೆ. ರಕ್ಷಿತಾ ಪ್ರತಿದಿನ ಅವನನ್ನು ಹುಡುಕಿಕೊಂಡು ತಿರಗಾಡುತ್ತಿದ್ದಾರೆ ಮತ್ತು ನ್ಯಾಯ ಕೊಡಿಸಿ ಅನ್ನುತ್ತಿದ್ದಾರೆ.

ಇದನ್ನೂ ಓದಿ:  ಎರಡು ಮಕ್ಕಳ ಮಹಿಳೆ-ಯುವಕನ ಲವ್ವಿಡವ್ವಿ ಗುಟ್ಟು ರಟ್ಟು: ಪ್ರೇಮ್ ಕಹಾನಿ ಸಾವಿನಲ್ಲಿ ಅಂತ್ಯ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.