AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Raichur: KSRTC ಸ್ಲೀಪರ್​ ಬಸ್​ ಪಲ್ಟಿ; ತಪ್ಪಿದ ಭಾರೀ ದುರಂತ

Raichur: KSRTC ಸ್ಲೀಪರ್​ ಬಸ್​ ಪಲ್ಟಿ; ತಪ್ಪಿದ ಭಾರೀ ದುರಂತ

ಭೀಮೇಶ್​​ ಪೂಜಾರ್
| Updated By: ಪ್ರಸನ್ನ ಹೆಗಡೆ|

Updated on:Sep 26, 2025 | 12:50 PM

Share

ಚಾಲಕನ ನಿಯಂತ್ರಣ ತಪ್ಪಿ KSRTC ಸ್ಲೀಪರ್​ ಬಸ್​ ಪಲ್ಟಿಯಾಗಿರುವ ಘಟನೆ ರಾಯಚೂರು ನಗರದ ಹೊರವಲಯ ಸಾಥಮೈಲ್ ಕ್ರಾಸ್ ಬಳಿ ನಡೆದಿದೆ. ಬಸ್​ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದಾವಣಗೆರೆ ಕಡೆಯಿಂದ ರಾಯಚೂರಿನತ್ತ ಬರುತ್ತಿದ್ದ ವೇಳೆ ಬಸ್​ ಚಾಲಕನ ನಿಯಂತ್ರಣ ಕಳೆದುಕೊಂಡಿದೆ.

ರಾಯಚೂರು, ಸೆಪ್ಟೆಂಬರ್​ 26: ನಗರದ ಹೊರವಲಯ ಸಾಥಮೈಲ್ ಕ್ರಾಸ್ ಬಳಿ KSRTC ಸ್ಲೀಪರ್​ ಬಸ್​ ಪಲ್ಟಿಯಾಗಿದೆ. ಬಸ್​ನಲ್ಲಿದ್ದ 15 ಜನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಪ್ರಯಾಣಿಕ ವಿಶ್ವನಾಥ್​ ಎಂಬುವವರ ಕಾಲು ಮುರಿದಿದ್ದು, ರಿಮ್ಸ್ ಆಸ್ಪತ್ರೆಗೆ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ದಾವಣಗೆರೆ ಕಡೆಯಿಂದ ರಾಯಚೂರಿನತ್ತ ಬರುತ್ತಿದ್ದ ಸ್ಲೀಪರ್​ ಬಸ್​ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಸ್ಥಳಕ್ಕೆ ರಾಯಚೂರು ಗ್ರಾಮೀಣ ಪೊಲೀಸರು ಭೇಟಿ ನೀಡಿದ್ದು, ಮಳೆ ನಡುವೆಯೂ ರಕ್ಷಣಾ ಕಾರ್ಯ ನಡೆಸಲಾಗಿದೆ.

ಮತ್ತಷ್ಟು ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Published on: Sep 26, 2025 12:44 PM