ಯಡಿಯೂರಪ್ಪ ಮೂಲಕ ಶಾಸಕನಾದ ಕುಮಾರ ಬಂಗಾರಪ್ಪ ನಂತರ ಅವರ ವಿರುದ್ಧವೇ ಮಾತಾಡಿದರು: ರೇಣುಕಾಚಾರ್ಯ
ಕುಮಾರ ಬಂಗಾರಪ್ಪ ಶಾಸಕನಾಗಿದ್ದೇ ಯಡಿಯೂರಪ್ಪನವರ ಕೃಪೆಯಿಂದ, ಸೊರಬದಿಂದ ಆಯ್ಕೆಯಾದ ಬಳಿಕ ಅವರು ಅಲ್ಲಿನ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಕಡೆಗಣಿಸಿದರು, ಅಧ್ಯಕ್ಷ ಸ್ಥಾನ ತಮ್ಮ ಬಣದವರಿಗೆ ಸಿಗುತ್ತದೆ ಅಂತ ಅವರು ಭಾವಿಸಿದ್ದರೆ ಅದು ತಿರುಕನ ಕನಸು, ರಾಜ್ಯಾಧ್ಯಕ್ಷನ ಸ್ಥಾನಕ್ಕೆ ತನ್ನದೇ ಅದ ಘನತೆ ಮತ್ತು ಗೌರವ ಇರುತ್ತದೆ ಎಂದು ರೇಣುಕಾಚಾರ್ಯ ಹೇಳಿದರು.
ದೆಹಲಿ: ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ದೆಹಲಿಯಲ್ಲಿದ್ದಾರೆ, ಯಾಕೆ, ಏನು, ಎತ್ತ ಅಂತ ಅವರೇ ಹೇಳಬೇಕು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಜನವರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗುತ್ತಾರೆ ಅಂತ ಕುಮಾರ ಬಂಗಾರಪ್ಪ, ಜಿಎಂ ಸಿದ್ದೇಶ್ವರ ಮೊದಲಾದವರು ಹೇಳಿಕೊಂಡು ತಿರುಗಾಡುತ್ತಿರುವುದು ಶುದ್ಧ ಸುಳ್ಳು ಮತ್ತು ಊಹಾಪೋಹ ಮಾತ್ರ, ವಿಜಯೇಂದ್ರರನ್ನು ಅಧ್ಯಕ್ಷ ಮಾಡಿದ್ದು ಯಡಿಯೂರಪ್ಪ ಅಲ್ಲ, ಪ್ರಧಾನಿ ನರೇಂದ್ರ ಮೋದಿ ಜೀ, ಜೆಪಿ ನಡ್ಡಾ ಜೀ, ಸಂತೋಷ ಜೀ ಮೊದಲಾದವರು, ಅವರ ವಿಜಯೇಂದ್ರಎನ್ನು ಬದಲಾಯಿಸಲು ಬಂಗಾರಪ್ಪ ಯಾರು ಎಂದು ಕೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಿಜಯೇಂದ್ರ ಒಬ್ಬ ಮಾಸ್ ಲೀಡರ್, ಪಕ್ಷ ಮುನ್ನಡೆಸುವ ಸಾಮರ್ಥ್ಯ ಅವರಲ್ಲಿದೆ: ಎಂಪಿ ರೇಣುಕಾಚಾರ್ಯ
Latest Videos