ಕುಮಾರಸ್ವಾಮಿ, ಶಿವಕುಮಾರ್ ವಿರುದ್ಧ ಆರೋಪ ಮಾಡಬಹುದು ಅದರೆ ಅವು ತನಿಖೆಯಲ್ಲಿ ಸಾಬೀತಾಗಬೇಕು: ಸತೀಶ್ ಜಾರಕಿಹೊಳಿ

|

Updated on: Apr 30, 2024 | 4:39 PM

ಸಿದ್ದರಾಮಯ್ಯ ಅವರ ಹಿರಿಮಗ ರಾಕೇಶ್ ಸಿದ್ದರಾಮಯ್ಯ ಬ್ರಸೆಲ್ಸ್ ನಲ್ಲಿ ತೀರಿಕೊಂಡಾಗ ಅವರ ಮೃತದೇಹವನ್ನು ತಾಯ್ನಾಡಿಗೆ ತರಲು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಆಗ ವಿದೇಶಾಂಗ ಖಾತೆ ಸಚಿವೆಯಾಗಿದ್ದ ದಿವಂಗತ ಸುಷ್ಮಾ ಸ್ವರಾಜ್ ಸಹಾಯ ಮಾಡಿದ್ದನ್ನು ಮುಖ್ಯಮಂತ್ರಿ ಮರೆತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ, ಅದು ನಡೆದ ಬಹಳ ವರ್ಷಗಳು ಕಳೆದಿವೆ, ಆಗ ಏನು ನಡೆದಿತ್ತು ಅನ್ನೋದು ತನಗೂ ಗೊತ್ತಿಲ್ಲ ಎಂದರು.

ಬೆಳಗಾವಿ: ಪ್ರಜ್ವಲ್ ರೇವಣ್ಣ ಅಶ್ಲೀಲ ಪೆನ್ ಡ್ರೈವ್ ಗಳ ವಿಚಾರ ಈಗ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಸದ್ದುಮಾಡುತ್ತಿದೆ, ಹೆಚ್ ಡಿ ಕುಮಾರಸ್ವಾಮಿಯರು (HD Kumaraswamy), ಇದು ಷಡ್ಯಂತ್ರ ಇದರ ಹಿಂದೆ ಡಿಸಿಎಂ ಶಿವಕುಮಾರ್ (DK Shivakumar) ಆರೋಪ ಮಾಡುತ್ತಿದ್ದಾರೆ, ಅದರೆ ಪ್ರಕರಣದ ಹಿಂದೆ ಯಾರಿದ್ದಾರೆ ಯಾರಿಲ್ಲ ಅನ್ನೋದು ಎಸ್ ಐಟಿ ತನಿಖೆ ನಡೆಸಿ ವರದಿ ಸಲ್ಲಿಸಿದ ನಂತರವೇ ಗೊತ್ತಾಗಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದರು. ಕುಮಾರಸ್ವಾಮಿ ಹೇಳಿದ ಮಾತ್ರಕ್ಕೆ ಅದು ಸತ್ಯವಾಗಲ್ಲ, ಅವರು ಮಾಡುತ್ತಿರುವ ಆರೋಪಗಳೆಲ್ಲ ಪ್ರೂವ್ ಆಗಬೇಕು ಎಂದು ಸಚಿವ ಹೇಳಿದರು.

ಪೆನ್ ಡ್ರೈವ್ ಗಳಲ್ಲಿ ಕಾಣುವ ಹೆಣ್ಣು ಮಕ್ಕಳ ಮಾನ ಮಾರ್ಯದೆ ಬೀದಿಪಾಲಾಗುತ್ತಿರುವುದು ಸತ್ಯ, ಅವುಗಳನ್ನು ಯಥಾವತ್ತಾಗಿ ಯಾರು ಬಿಡುಗಡೆ ಮಾಡಿದ್ದು ಎಸ್ ಐಟಿ ತನಿಖೆಯಲ್ಲಿ ಗೊತ್ತಾದರೆ ಅವರನ್ನೂ ಶಿಕ್ಷೆಗೊಳಪಡಿಸಬಹುದು ಎಂದು ಜಾರಕಿಹೊಳಿ ಹೇಳಿದರು.

ಸಿದ್ದರಾಮಯ್ಯ ಅವರ ಹಿರಿಮಗ ರಾಕೇಶ್ ಸಿದ್ದರಾಮಯ್ಯ ಬ್ರಸೆಲ್ಸ್ ನಲ್ಲಿ ತೀರಿಕೊಂಡಾಗ ಅವರ ಮೃತದೇಹವನ್ನು ತಾಯ್ನಾಡಿಗೆ ತರಲು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಆಗ ವಿದೇಶಾಂಗ ಖಾತೆ ಸಚಿವೆಯಾಗಿದ್ದ ದಿವಂಗತ ಸುಷ್ಮಾ ಸ್ವರಾಜ್ ಸಹಾಯ ಮಾಡಿದ್ದನ್ನು ಮುಖ್ಯಮಂತ್ರಿ ಮರೆತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ, ಅದು ನಡೆದ ಬಹಳ ವರ್ಷಗಳು ಕಳೆದಿವೆ, ಆಗ ಏನು ನಡೆದಿತ್ತು ಅನ್ನೋದು ತನಗೂ ಗೊತ್ತಿಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:       ಪ್ರಜ್ವಲ್ ರೇವಣ್ಣ ಮಾಜಿ ಪ್ರಧಾನಿಯೊಬ್ಬರ ಮೊಮ್ಮಗನಾಗಿರುವುದರಿಂದ ಪ್ರಕರಣ ಹೆಚ್ಚು ಸೆನ್ಸಿಟಿವ್ ಆಗಿದೆ: ಪ್ರಲ್ಹಾದ್ ಜೋಶಿ

Published on: Apr 30, 2024 04:38 PM