ರಾಷ್ಟ್ರಧ್ವಜ ಹಾರಿಸಲು ಚನ್ನಪಟ್ಟಣಕ್ಕೆ ಬಾರದ ಕುಮಾರಸ್ವಾಮಿಗೆ ವೋಟು ಕೇಳುವ ಧೈರ್ಯವಿಲ್ಲ: ಶಿವಕುಮಾರ್

|

Updated on: Nov 04, 2024 | 7:36 PM

ಚನ್ನಪಟ್ಟಣ ಮತದಾರರಿಗೆ ಸಿಪಿ ಯೋಗೇಶ್ವರ್ ಒಬ್ಬ ರೆಡಿಮೇಡ್ ಗಂಡು, ಹಿಂದಿನ ತಮ್ಮ ಸರ್ಕಾರದ ಅವಧಿಯಲ್ಲಿ ಅವರು ಕೆರೆಗಳನ್ನು ತುಂಬಿಸುವ ಕಾರ್ಯಕ್ರಮ ರೂಪಿಸಿದ್ದಾರೆ, 5 ಗ್ಯಾರಂಟಿ ಯೋಜನೆಗಳನ್ನು ನೀಡಿರುವ ಸರ್ಕಾರ ಯೋಗೇಶ್ವರ್ ಬೆನ್ನಿಗೆ ನಿಂತಿದೆ, ಎಂದ ಶಿವಕುಮಾರ್ ನಿಖಿಲ್ ಕುಮಾರಸ್ವಾಮಿ ಇನ್ನೂ ಚಿಕ್ಕ ಹುಡುಗ, ಅವರ ಬಗ್ಗೆ ಮಾತಾಡಲ್ಲ ಎಂದು ಶಿವಕುಮಾರ್ ಹೇಳಿದರು.

ರಾಮನಗರ: ನಮ್ಮ ರಾಷ್ಟ್ರಧ್ವಜಕ್ಕೆ ಚಿಕ್ಕಮಕ್ಕಳು, ಶಾಲಾಮಕ್ಕಳು ಸಹ ಗೌರವ ಸಲ್ಲಿಸುತ್ತಾರೆ, ಅದರೆ ರಾಮನಗರ ಮತ್ತು ಚನ್ನಪಟ್ಟಣದಿಂದ ಸಂಸತ್ತು ಮತ್ತು ವಿಧಾನಸಭೆಗೆ ಆಯ್ಕೆಯಾಗಿರುವ ಹೆಚ್ ಡಿ ಕುಮಾರಸ್ವಾಮಿಯವರು ರಾಷ್ಟ್ರಧ್ವಜ ಹಾರಿಸಲು ಮತ್ತು ಕನ್ನಡ ಧ್ವಜ ಹಾರಿಸಲು ಒಮ್ಮೆಯೂ ರಾಮನಗರಕ್ಕೆ ಬಂದವರಲ್ಲ, ಹಾಗಾಗೇ, ಅವರಿಗೆ ಚನ್ನಪಟ್ಟಣದಲ್ಲಿ ತಮ್ಮ ಮಗನಿಗಾಗಿ ವೋಟು ಕೇಳಲು ಧೈರ್ಯವಿರಲೇಬಾರದು, ಅದ್ಯಾವ ನೈತಿಕತೆ ಇಟ್ಟುಕೊಂಡು ಅವರು ಮತ ಕೇಳುತ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಯೋಗೇಶ್ವರ್ ಗೆದ್ದರೆ ಶಿವಕುಮಾರ್ ಮತ್ತೊಂದು ಹಂತಕ್ಕೆ ಹೋಗ್ತಾರೆ ಎಂದ ಪ್ರದೀಪ್ ಈಶ್ವರ್

Published on: Nov 04, 2024 06:50 PM