ಕುಮಾರಸ್ವಾಮಿ ಚನ್ನಪಟ್ಟಣವನ್ನು ಅಧ್ವಾನ ಮಾಡಿದ್ದಾರೆ, ಎಲ್ಲವನ್ನು ಸರಿಪಡಿಸಬೇಕಿದೆ: ಸಿಪಿ ಯೋಗೇಶ್ವರ್

|

Updated on: Nov 25, 2024 | 6:38 PM

ದೇವೇಗೌಡರು ಹುಟ್ಟುಹಾಕಿದ ಜೆಡಿಎಸ್ ಪಕ್ಷಕ್ಕೆ ನಾಯಕತ್ವ ಇಲ್ಲದಂತಾಗಿದೆ, ಗೌಡರಿಗೆ ವಯಸ್ಸಾಗಿದೆ ಮತ್ತು ಕುಮಾರಸ್ವಾಮಿ ನಾಯಕತ್ವವನ್ನು ಜನ ತಿರಸ್ಕರಿಸಿದ್ದಾರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್​ಗೆ 19 ಸೀಟು ಬಂದಿದ್ದು ಇದಕ್ಕೆ ಸಾಕ್ಷಿ. ಅದಕ್ಕೆ ತದ್ವಿರುದ್ಧವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷಕ್ಕೆ 136 ಸೀಟುಗಳನ್ನು ಗೆದ್ದರು, ವ್ಯತ್ಯಾಸ ನಿಚ್ಚಳವಾಗಿ ಗೊತ್ತಾಗುತ್ತಿದೆ ಎಂದು ಯೋಗೇಶ್ವರ್ ಹೇಳಿದರು.

ರಾಮನಗರ: ಚನ್ನಪಟ್ಟಣ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಸಿಪಿ ಯೋಗೇಶ್ವರ್ ಅವರು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲೇ ಕೆಲಸ ಆರಂಭಿಸಿರುವಂತಿದೆ. ಚನ್ನಪಟ್ಟಣ ನಗರಸಭೆಯ ಸಭೆ ಕರೆದು ಆಯುಕ್ತರ ಜೊತೆ ಯುಜಿಡಿ, ಕಸ ವೀಲೆವಾರಿ ಮತ್ತು ಇತರ ಸಮಸ್ಯೆಗಳ ಚರ್ಚೆ ಮಾಡಿದ್ದಾರೆ, ಚನ್ನಪಟ್ಟಣದ ಬಸ್ ನಿಲ್ದಾಣಕ್ಕೆ ಕಾಯಕಲ್ಪ ನೀಡುವ ನಿರ್ಧಾರ ಮಾಡಿಕೊಂಡಿದ್ದಾರಂತೆ. ಶಾಸಕನಾಗಿ ಆಯ್ಕೆಯಾಗಿದ್ದ ಹೆಚ್ ಡಿ ಕುಮಾರಸ್ವಾಮಿಯವರು ಕ್ಷೇತ್ರಕ್ಕಾಗಿ ಏನೂ ಮಾಡದ ಕಾರಣ ತಾನು ಬಹಳ ಕೆಲಸ ಮಾಡಬೇಕಿದೆ ಎಂದು ಯೋಗೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಯೋಗೇಶ್ವರ್ ಗೆಲುವಿನ ಹಿಂದೆ ಹೊಳೆ ಆಂಜನೇಯ