DKS Vs HDK; ಕುಮಾರಸ್ವಾಮಿ ನಿಲುವನ್ನು ಬದಲಿಸುತ್ತಿರುತ್ತಾರೆ ಹಾಗಾಗಿ ಪಕ್ಷದ ನಿಲುವನ್ನು ದೇವೇಗೌಡರು ಸ್ಪಷ್ಟಪಡಿಸಲಿ: ಡಿಕೆ ಶಿವಕುಮಾರ್
ಕುಮಾರಸ್ವಾಮಿಯವರಿಗೆ ಬೆಂಬಲ ನೀಡುವ ಹಕ್ಕಿದೆ, ಅವರೊಂದಿಗೆ ಬೇರೆಯವರೂ ಬೆಂಬಲ ನೀಡಲಿ ನಮ್ಮದೇನೂ ಅಭ್ಯಂತರವಿಲ್ಲ ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು: ಸಸ್ಪೆಂಡ್ ಆಗಿರುವ ಬಿಜೆಪಿ ಶಾಸಕರಿಗೆ ಬೆಂಬಲ ಪಡಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಂದು ನಗರದಲ್ಲಿ ತಿರುಗೇಟು ನೀಡಿದರು. ಸುದ್ದಿಗಾರರೊಂದಿಗೆ ಮಾತಾಡಿದ ಶಿವಕುಮಾರ್, ಕುಮಾರಸ್ವಾಮಿಯವರಿಗೆ ಬೆಂಬಲ ನೀಡುವ ಹಕ್ಕಿದೆ, ಅವರೊಂದಿಗೆ ಬೇರೆಯವರೂ ಬೆಂಬಲ ನೀಡಲಿ ನಮ್ಮದೇನೂ ಅಭ್ಯಂತರವಿಲ್ಲ ಎಂದು ಹೇಳಿದರು. ಮುಂದುವರಿದು ಮಾತಾಡಿದ ಶಿವಕುಮಾರ್, ಜೆಡಿಎಸ್ ನಿಲುವು ಏನು ಅಂತ ಹೆಚ್ ಡಿ ದೇವೇಗೌಡ (HD Devegowda) ಅವರು ಹೇಳಲಿ ಅಥವಾ ರಾಷ್ಟ್ರೀಯ ಅಧ್ಯಕ್ಷರು ಸ್ಪಷ್ಟಪಡಿಸಲಿ, ಯಾಕೆಂದರೆ ಕುಮಾರಸ್ವಾಮಿ ಪದೇಪದೆ ತಮ್ಮ ನಿಲುವು ಬದಲಿಸುತ್ತಿರುತ್ತಾರೆ ಎಂದು ಕುಮರಸ್ವಾಮಿಯವರ ಕಾಲೆಳೆದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos