ಕಾಂಗ್ರೆಸ್ ಶಾಸಕ ರಾಜಣ್ಣ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಕ್ಷರಶಃ ಗುಡುಗಿದರು!

Edited By:

Updated on: Jul 01, 2022 | 7:28 PM

ಆದರೆ ಮಧುಗಿರಿ ಜನರಿಂದಲೇ ನೀನು ಪಶ್ಚಾತ್ತಾಪ ಪಡುವಂತೆ ಮಾಡುತ್ತೇನೆ. ನಿನ್ನ ದುರಹಂಕಾರದ ಮಾತುಗಳಿಗೆ ಅವರಿಂದಲೇ ಉತ್ತರ ಕೊಡಿಸುತ್ತೇನೆ. ನೀನು ಪ್ರಾಯಶ್ಚಿತ ಅನುಭವಿಸುವುದು ನಿಶ್ಚಿತ, ವೇಟ್ ಮಾಡು, ಎಂದು ಕುಮಾರಸ್ವಾಮಿ ಹೇಳಿದರು.

Bengaluru: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (HD Kumaraswamy) ಅವರು ಶುಕ್ರವಾರ ಬೆಂಗಳೂರಲ್ಲಿ ಮಧುಗಿರಿ ಶಾಸಕ ಕೆಎನ್ ರಾಜಣ್ಣ (KN Rajanna) ವಿರುದ್ಧ ಅಕ್ಷರಶಃ ಗುಡುಗಿದರು. ತಮ್ಮ ತಂದೆ ದೇವೇಗೌಡರ (HD Devegowda) ಅರೋಗ್ಯ ಮತ್ತು ಆಯಸ್ಸು ದೇವರು ಕೊಟ್ಟ ಬಳುವಳಿ. ಅವರ ಬಗ್ಗೆ ಮಾತಾಡುವಾಗ ಮೇಮೇಲೆ ಪ್ರಜ್ಞೆಯಿರಲಿ ಅಂತ ನಿನಗೆ ಎಚ್ಚರಿಕೆ ಕೊಡ್ತಾ ಇದ್ದೀನಿ. ಯಾರ ಹಣೆಬರಹವನ್ನೂ ನಿನ್ನಿಂದ ಬದಲಾಯಿಸಿವುದು ಸಾಧ್ಯವಿಲ್ಲ. ಅವರ ಮಗ ನಾನಿನ್ನೂ ಬದುಕಿದ್ದೇನೆ, ಕ್ಷಮೆ ಕೇಳು ಅಂತ ನಿನಗೆ ಹೇಳಲ್ಲ. ಆದರೆ ಮಧುಗಿರಿ ಜನರಿಂದಲೇ ನೀನು ಪಶ್ಚಾತ್ತಾಪ ಪಡುವಂತೆ ಮಾಡುತ್ತೇನೆ. ನಿನ್ನ ದುರಹಂಕಾರದ ಮಾತುಗಳಿಗೆ ಅವರಿಂದಲೇ ಉತ್ತರ ಕೊಡಿಸುತ್ತೇನೆ. ನೀನು ಪ್ರಾಯಶ್ಚಿತ ಅನುಭವಿಸುವುದು ನಿಶ್ಚಿತ, ವೇಟ್ ಮಾಡು, ಎಂದು ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ:  Viral Video: ತಾಯಿಯಂತೆ ಮೇಕಪ್ ಮಾಡಿ ಕೊನೆಗೆ ಬಾಲಕಿ ಮಾಡಿದ್ದೇನು? ವಿಡಿಯೋವನ್ನು ಕೊನೆತಕನ ನೋಡಿದರೆ ಖಂಡಿತ ನಗು ಬರುತ್ತೆ