ಸಕಲೇಶಪುರದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ, ಅಕ್ರಮದಲ್ಲಿ ತೊಡಗಿರುವವರಿಗೆ ಪೊಲೀಸರ ಬೆಂಬಲವಿದೆ: ಪ್ರಜ್ವಲ್ ರೇವಣ್ಣ

ಸಕಲೇಶಪುರದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ, ಅಕ್ರಮದಲ್ಲಿ ತೊಡಗಿರುವವರಿಗೆ ಪೊಲೀಸರ ಬೆಂಬಲವಿದೆ: ಪ್ರಜ್ವಲ್ ರೇವಣ್ಣ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 01, 2022 | 5:58 PM

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಯುನ ನಾಯಕ ಪ್ರಜ್ವಲ್ ಇತರ ನಾಯಕರ ಹಾಗೆ ಅಧಿಕಾರಿಗಳನ್ನು ಬಯ್ಯುವುದು ಏಕವಚನದಲ್ಲಿ ಮಾತಾಡಿಸುವುದು ಮಾಡುತ್ತಿಲ್ಲ.

ಹಾಸನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರು ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣೆ ಸಮಿತಿ (DISHA) ನಡೆಸಿ ಸಕಲೇಶಪುರದಲ್ಲಿ ಅಕ್ರಮ ಮರಳು ದಂಧೆ (illegal sand mining) ನಡೆಯುತ್ತಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿಕೊಂಡು ಕೂತಿದ್ದಾರೆ ಎಂದು ಹೇಳಿ ಅವರನ್ನು ತರಾಟೆಗೆ ತೆಗೆದುಕೊಂಡರು. ಮರಳು ದಂಧೆಯಲ್ಲಿ ತೊಡಗಿರುವವರಿಗೆ ಪೊಲೀಸರ ಬೆಂಬಲ ಇದೆ, ಪ್ರತಿ ಲಾರಿಗೆ ತಿಂಗಳೊಂದಕ್ಕೆ ಅವರು 40,000 ರೂ. ಲಂಚ ಪಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಪ್ರಜ್ವಲ್ ಹಾಸನ ಪೊಲೀಸ್ ವರಿಷ್ಠಾಧಿಕಾರಿಯ ಮುಖ ನೋಡುತ್ತಾ ಹೇಳಿದರು. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಯುನ ನಾಯಕ ಪ್ರಜ್ವಲ್ ಇತರ ನಾಯಕರ ಹಾಗೆ ಅಧಿಕಾರಿಗಳನ್ನು ಬಯ್ಯುವುದು ಏಕವಚನದಲ್ಲಿ ಮಾತಾಡಿಸುವುದು ಮಾಡುತ್ತಿಲ್ಲ.

ಇದನ್ನೂ ಓದಿ:  Viral Video: ತನ್ನ ದಾರಿಗೆ ಅಡ್ಡಲಾಗಿ ನಿಂತ ವ್ಯಕ್ತಿಗೆ ಧೂಳೆಬ್ಬಿಸಿ ದಾರಿ ಬಿಡುವಂತೆ ಸೂಚಿಸಿದ ಆನೆ, ವಿಡಿಯೋ ವೈರಲ್