ಕುಮಾರಸ್ವಾಮಿ ಸರ್ಕಾರ ರಚಿಸುವ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಅಂದಿದ್ದರು; ನಾನು ಬಟ್ಟೆ ಗಿಫ್ಟ್ ಮಾಡೋಣ ಅಂದ್ಕೊಂಡಿದ್ದೆ: ಶಿವಕುಮಾರ್

Updated on: Jun 20, 2025 | 2:49 PM

ಬಟ್ಟೆ ಕೊಡು-ತೆಗೆದುಕೊಳ್ಳುವ ವಿಚಾರದಲ್ಲಿ ಶಿವಕುಮಾರ್ ಮತ್ತು ಕುಮಾರಸ್ವಾಮಿ ನಡುವಿನ ಕದನ ಮುಂದುವರಿದಿದೆ. ಲೂಟಿ ಹೊಡೆದ ಹಣದಲ್ಲಿ ಶಿವಕುಮಾರ್ ಕೊಡುವ ಬಟ್ಟೆ ತೆಗೆದುಕೊಳ್ಳುವ ದಾರಿದ್ರ್ಯ ಬಂದಿಲ್ಲ ಅಂತ ಕುಮಾರಸ್ವಾಮಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ಅವರ ಸರ್ಕಾರ ರಚಿಸಲು ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದರು, ನಾನು ಬಟ್ಟೆ ರೂಪದಲ್ಲಿ ಗಿಫ್ಟ್ ಕೊಡೋಣ ಅಂದುಕೊಂಡಿದ್ದೆ ಎಂದರು.

ಬೆಂಗಳೂರು, ಜೂನ್ 20: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಸತಿ ಯೋಜನೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ (reservation for Muslims) ನೀಡಿರೋದು ಮನವೊಲಿಕೆಯ ರಾಜಕಾರಣವಲ್ಲ, ಬಿಜೆಪಿಯವರು ರಾಜಕೀಯಕ್ಕಾಗಿ ಅದನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು. ಲ್ಯಾಪ್ಸ್ ಅದ ಮನೆಗಳಿಂದ ಸರ್ಕಾರ ನಷ್ಟ ಮಾಡಿಕೊಳ್ಳಲಾಗಲ್ಲ, ಹಿಂದೆ ಪರಿಶಿಷ್ಟ ಜಾತಿಯವರಿಗೆ ವಸತಿ ಯೋಜನೆಯಲ್ಲಿ ಮೀಸಲಾತಿ ಕಲ್ಪಿಸಲಾಗಿತ್ತು, ಹಂಚಿಕೆಯ ನಂತರ ಉಳಿದ ಮನೆಗಳನ್ನು ಒಬಿಸಿ ಮತ್ತು ಸಾಮಾನ್ಯ ವರ್ಗದವರಿಗೆ ಹಂಚಲಾಗಿತ್ತು, ಬಿಜೆಪಿಯವರು ಸದನದಲ್ಲಿ ಈ ಪ್ರಶ್ನೆಗಳನ್ನು ಕೇಳಲಿ ಉತ್ತರ ಕೊಡ್ತೀನಿ ಎಂದು ಶಿವಕುಮಾರ್ ಹೇಳಿದರು.

ಇದನ್ನೂ ಓದಿ:  ಶಿವಕುಮಾರ್ 2028ರಲ್ಲಿ ಚೀಫ್ ಮಿನಿಸ್ಟ್ರಾಗಲಿ ಇಲ್ಲ ಪ್ರೈಮ್ ಮಿನಿಸ್ಟರ್, ಯಾರು ಬೇಡವೆನ್ನುತ್ತಾರೆ: ರಾಜಣ್ಣ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿಕ್ಲಿಕ್ ಮಾಡಿ