ಸಮಯ ಬಂದಾಗ ಕುಮಾರಸ್ವಾಮಿ ವಿಷಯ ಜನರ ಮುಂದೆ ಬಿಚ್ಚಿಡುತ್ತೇವೆ: ಡಿಕೆ ಸುರೇಶ್, ಸಂಸದ

|

Updated on: Oct 09, 2023 | 3:09 PM

ಶಿವಕುಮಾರ್ ಪುನಃ ತಿಹಾರ್ ಜೈಲಿಗೆ ಹೋಗುತ್ತಾರೆ ಅಂತ ಕುಮಾರಸ್ವಾಮಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಸುರೇಶ್, ಕುಮಾರಸ್ವಾಮಿ ಮೊನ್ನೆ ದೆಹಲಿಗೆ ಹೋದಾಗ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಇದನ್ನೇ ಚರ್ಚಿಸಿರುವಂತಿದೆ. ಅವರೇನು ಮಾಡ್ತಾರೋ ಮಾಡಲಿ, ಮಿಕ್ಕಿದ್ದನ್ನು ಕಾಲವೇ ನಿರ್ಣಯಿಸುತ್ತದೆ ಎಂದರು.

ಬೆಂಗಳೂರು: ಇದನ್ನು ನಿರೀಕ್ಷಿಸಲಾಗಿತ್ತು. ನಿನ್ನೆ ಬಿಡದಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು (HD Kumaraswamy) ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮೇಲೆ ತೀವ್ರ ವಾಗ್ದಾಳಿ ನಡೆಸಿದ ಬಳಿಕ; ಶಿವಕುಮಾರ್ ಅಥವಾ ಅವರ ಸಹೋದರ ಸಂಸದ ಡಿಕೆ ಸುರೇಶ್ (DK Suresh) ಅಷ್ಟೇ ತೀಕ್ಷ್ಣವಾದ ಪ್ರತಿಕ್ರಿಯೆ ನೀಡುವುದು ನಿಶ್ಚಿತ ಅಂತ ಕನ್ನಡಿಗರಿಗೆ ಗೊತ್ತಿತ್ತು. ಬೆಂಗಳೂರಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸುರೇಶ್, ಕುಮಾರಸ್ವಾಮಿಗೆ ಶಿವಕುಮಾರ್ ಬಗ್ಗೆ ಮಾತಾಡದೇ ಹೋದರೆ ನಿದ್ರೆ ಬರಲ್ಲ, ಹಾಗಾಗೇ ಟೀಕೆ ಮಾಡುತ್ತ್ತಿರುತ್ತಾರೆ ಎಂದು ಹೇಳಿದರು. ಶಿವಕುಮಾರ್ ಪುನಃ ತಿಹಾರ್ ಜೈಲಿಗೆ ಹೋಗುತ್ತಾರೆ ಅಂತ ಕುಮಾರಸ್ವಾಮಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಸುರೇಶ್, ಕುಮಾರಸ್ವಾಮಿ ಮೊನ್ನೆ ದೆಹಲಿಗೆ ಹೋದಾಗ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಇದನ್ನೇ ಚರ್ಚಿಸಿರುವಂತಿದೆ. ಅವರೇನು ಮಾಡ್ತಾರೋ ಮಾಡಲಿ, ಮಿಕ್ಕಿದ್ದನ್ನು ಕಾಲವೇ ನಿರ್ಣಯಿಸುತ್ತದೆ ಎಂದರು. ಸಮಯ ಸಂದರ್ಭ ಬಂದಾಗ ಕುಮಾರಸ್ವಾಮಿ ವಿಷಯಗಳನ್ನು ಜನರ ಮುಂದೆ ಬಿಚ್ಚಿಡುತ್ತೇವೆ ಎಂದು ಸುರೇಶ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ